ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ಅಭಿನಯದ ಮೂಲಕ ಮನಗೆದ್ದಿರುವ ನಟಿ ರಂಜನಿ ರಾಘವನ್, ನಿರ್ದೇಶಕಿಯಾಗಿಯೂ ಹೆಜ್ಜೆ ಇಟ್ಟಿದ್ದಾರೆ. ಅವರು ನಿರ್ದೇಶಿಸುತ್ತಿರುವ ‘ಡಿಡಿ ಢಿಕ್ಕಿ’ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದ್ದು, ಇದೇ ಸಂದರ್ಭದಲ್ಲಿ ಅವರು ನಟಿಸಿರುವ ‘ಸ್ವಪ್ನಮಂಟಪ’ ಸಿನಿಮಾ ಜುಲೈ 25ರಂದು ತೆರೆಕಂಡಿದೆ. ಈ ಸಿನಿಮಾ ಹಾಗೂ ನಿರ್ದೇಶನದ ಸವಾಲುಗಳ ಕುರಿತು ‘ಸಿನಿಮಾ ರಂಜನೆ’ ಜೊತೆಗೆ ರಂಜನಿ ಮಾತನಾಡಿದ್ದಾರೆ.

‘ಪ್ರತಿಯೊಬ್ಬರಿಗೂ ಇರುವ ಒಂದು ಸಮಾನಾಂತರವಾದ ಪ್ರಪಂಚ ‘ಸ್ವಪ್ನಮಂಟಪ’. ನಾವು ಒಂದು ಕಡೆ ಇದ್ದುಕೊಂಡು ಕಾಣುವ ಮತ್ತೊಂದು ಕನಸಿನ ಲೋಕವದು. ಅದು ವೃತ್ತಿ ಜೀವನದಲ್ಲಾಗಲಿ ಅಥವಾ ವೈಯಕ್ತಿಕ ಜೀವನದಲ್ಲಾಗಲಿ ಒಂದು ಹಂತಕ್ಕೆ ತಲುಪಬೇಕು ಎಂದು ಎಲ್ಲರಿಗೂ ಕನಸು ಇರುತ್ತದೆ. ಆ ಕನಸಿನ ಜಾಗ ‘ಸ್ವಪ್ನಮಂಟಪ’. ಚಿತ್ರದಲ್ಲಿ ಮೂರು ಶೇಡ್ಗಳಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಈ ಒಂದು ಸವಾಲೇ ಈ ಚಿತ್ರವನ್ನು ಮಾಡಲು ಹುಮ್ಮಸ್ಸು ನೀಡಿತು. ಶಿಕ್ಷಕಿಯಾಗಿ, ರಾಣಿಯಾಗಿ ನಾನು ಇಲ್ಲಿ ನಟಿಸಿದ್ದೇನೆ. ನನ್ನ ಇನ್ನೊಂದು ಶೇಡ್ಗೆ ಕಾರಣವೇನು ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಆರಂಭದಲ್ಲಿ ಈ ಪಾತ್ರಗಳನ್ನು ನಿಭಾಯಿಸಲು ಸಾಧ್ಯವೇ ಎನ್ನುವ ಸಂಶಯವಿತ್ತು. ಆದರೆ ಸಿನಿಮಾ ಮುಗಿದ ಬಳಿಕ ಎಲ್ಲರೂ ಈ ಪಾತ್ರವನ್ನು ಇಷ್ಟಪಟ್ಟರು’ ಎಂದು ಮಾತು ಆರಂಭಿಸಿದರು ರಂಜನಿ.

‘ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಡಿ ಕೆಲಸ ಮಾಡಲು ಸಿಗುತ್ತದೆ ಎನ್ನುವ ಕಾರಣಕ್ಕೇ ಸಿನಿಮಾ ಒಪ್ಪಿಕೊಂಡಿದ್ದೆ. ನನಗೆ ಈ ಮಾದರಿಯ ಸಿನಿಮಾ ಪ್ರಪಂಚವನ್ನು ಅನ್ವೇಷಿಸುವ ಆಸಕ್ತಿ ಇತ್ತು. ಇಂತಹ ಚಿತ್ರಗಳು ಚಲನಚಿತ್ರೋತ್ಸವಗಳಲ್ಲಿ ಮೊದಲು ಪ್ರದರ್ಶನಗೊಂಡರೂ ಒಳ್ಳೆಯ ಸಿನಿಮಾ ಎಂದು ಸ್ವೀಕೃತವಾದಾಗ ನಮ್ಮ ವೃತ್ತಿ ಜೀವನದಲ್ಲಿ ಮೈಲುಗಲ್ಲುಗಳಾಗಬಹುದು. ನಟಿ ಸೌಂದರ್ಯ ಅವರು ‘ದ್ವೀಪ’ ಸಿನಿಮಾದಲ್ಲಿ ನಟಿಸಿದ್ದನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ. ಹೀಗಾಗಿ ಈ ರೀತಿಯ ಸಿನಿಮಾಗಳಲ್ಲೂ ನಟಿಸಿ ಅನ್ವೇಷಿಸಬೇಕು ಎನ್ನುವ ಕಾರಣಕ್ಕೆ ಒಪ್ಪಿಕೊಂಡಿದ್ದೆ’ ಎಂದರು.

‘ನಿರ್ಮಾಪಕರು ಈ ಸಿನಿಮಾವನ್ನು ಇದೀಗ ಜನರ ಎದುರಿಗೆ ಇಡುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಖಂಡಿತವಾಗಿಯೂ ಇದೊಂದು ಸವಾಲಿನ ಕೆಲಸವೇ. ನಿಗದಿತ ಪ್ರೇಕ್ಷಕರನ್ನು ತಲುಪುವುದು ಮುಖ್ಯ. ವಿಜಯ ರಾಘವೇಂದ್ರ ಅವರ ಜೊತೆ ಎರಡನೇ ಬಾರಿ ನಟಿಸಿದೆ. ಅವರ ವ್ಯಕ್ತಿತ್ವ ಎಲ್ಲರಿಗೂ ಇಷ್ಟ. ಈ ಮಾದರಿಯ ಪಾತ್ರಗಳಿಗೆ ಅವರು ಹೇಳಿಮಾಡಿಸಿದಂಥ ವ್ಯಕ್ತಿ. ‘ಸ್ವಪ್ನಮಂಟಪ’ದಲ್ಲಿ ವಿಜಯ್ ಅವರ ರಾಜನ ಪಾತ್ರವನ್ನು ನೋಡಿದಾಗ ‘ಕಲ್ಲರಳಿ ಹೂವಾಗಿ’ ಸಿನಿಮಾ ನೆನಪಾಗುತ್ತದೆ’ ಎನ್ನುತ್ತಾ ರಂಜನಿ ತಮ್ಮ ನಿರ್ದೇಶನದ ‘ಡಿಡಿ ಢಿಕ್ಕಿ’ ಸಿನಿಮಾದತ್ತ ಮಾತು ಹೊರಳಿಸಿದರು.

‘ನನ್ನ ನಿರ್ದೇಶನದ ಸಿನಿಮಾದ ಶೇಕಡ 80ರಷ್ಟು ಚಿತ್ರೀಕರಣ ಮುಗಿದಿದೆ. ಕ್ಲೈಮ್ಯಾಕ್ಸ್ ಮತ್ತು ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಯಾವಾಗ ಬಿಡುಗಡೆ ಎಂದು ಹೇಳುತ್ತೇನೆ. ನಿರ್ದೇಶನದಲ್ಲಿ ಪ್ರತಿ ದಿನವೂ ಸವಾಲುಗಳಿದ್ದವು. ಮಾಡಲೇಬೇಕು ಎಂದು ಪಣತೊಟ್ಟು ಕೆಲಸ ಆರಂಭಿಸಿದರೆ ನಮ್ಮ ಶಕ್ತಿಯನ್ನು ಯಾರಿಂದಲೂ ನಾಶಗೊಳಿಸಲು ಸಾಧ್ಯವಿಲ್ಲ. ಈ ಸಿನಿಮಾದ ನಿರ್ದೇಶನ ಮಾಡುತ್ತಿರಬೇಕಾದರೆ ಬರಗೂರು ರಾಮಚಂದ್ರಪ್ಪ ಅವರ ಶೈಲಿಯನ್ನು ಅನುಸರಿಸುತ್ತಿದ್ದೆ. ಅವರು ಒಂದು ದೃಶ್ಯದ ಚಿತ್ರೀಕರಣ ಆರಂಭಕ್ಕೂ ಮುನ್ನ ಎಲ್ಲರನ್ನೂ ಜೊತೆಗೂಡಿಸಿ ಪಾಠ ಮಾಡಿದಂತೆ ವಿವರಣೆ ನೀಡುತ್ತಿದ್ದರು. ಇಂದಿನ ಕ್ಯಾರಾವಾನ್ ಜಗತ್ತಿನಲ್ಲಿ ಇದು ಅಪರೂಪವಾಗಿದೆ. ನಾನು ನಮ್ಮ ಸಿನಿಮಾದಲ್ಲಿ ಬರಗೂರು ಅವರ ಶೈಲಿ ಅನುಸರಿಸಿದ್ದೇನೆ’ ಎಂದು ಮಾತಿಗೆ ವಿರಾಮವಿತ್ತರು.

‘ಸ್ವಪ್ನ ಮಂಟಪ’ದ ಕಥೆಯೇನು?

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ತಮ್ಮದೇ ಕಾದಂಬರಿಯನ್ನು ಆಧರಿಸಿ ನಿರ್ದೇಶಿಸಿರುವ ಸಿನಿಮಾವಿದು. ವಿಜಯ ರಾಘವೇಂದ್ರ ಹಾಗೂ ರಂಜಿನಿ ರಾಘವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಮೈಸೂರಿನ ಬಾಬುನಾಯ್ಕ್ ತಮ್ಮ ಮಲೈಮಹದೇಶ್ವರ ಎಂಟರ್ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿದ್ದಾರೆ. ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪ ಅವರೇ ಚಿತ್ರಕಥೆ ಸಂಭಾಷಣೆ ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ.

ಚಿತ್ರವು ಪಾರಂಪರಿಕ ಸ್ಥಳಗಳ ರಕ್ಷಣೆಯನ್ನು ಪ್ರತಿಪಾದಿಸುವ ಕಥಾವಸ್ತುವನ್ನು ಒಳಗೊಂಡಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ಸ್ವಪ್ನ ಮಂಟಪವನ್ನು ಕೆಡವಿ ಹಾಕುವ ಪ್ರಯತ್ನವನ್ನು ಕೆಲವರು ಮಾಡಿದಾಗ ಕಥಾನಾಯಕ ಮತ್ತು ನಾಯಕಿ ಜನರನ್ನು ಸಂಘಟಿಸಿ ಸ್ವಪ್ನ ಮಂಟಪವನ್ನು ಉಳಿಸಿ ಸರ್ಕಾರದ ಅಧಿಕೃತ ಸ್ಮಾರಕದ ಪಟ್ಟಿಗೆ ಸೇರಿಸುವ ಮೂಲಕ ಚಾರಿತ್ರಿಕ ಸ್ಮಾರಕಗಳ ಪರಂಪರೆಯನ್ನು ಎತ್ತಿ ಹಿಡಿಯುತ್ತಾರೆ. ಸಿನಿಮಾದಲ್ಲಿ ಸ್ವಪ್ನ ಮಂಟಪವನ್ನು ನಿರ್ಮಾಣ ಮಾಡಿದ್ದ ರಾಜ-ರಾಣಿಯರ ಕಥನವೂ ಹಿನ್ನೋಟ ತಂತ್ರದಲ್ಲಿ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.