ಗುರುವಾರ , ಮೇ 26, 2022
26 °C

'83' ಸಿನಿಮಾ ಪ್ರೀಮಿಯರ್‌ ವೇದಿಕೆಯಲ್ಲಿ ರಣವೀರ್‌ ಸಿಂಗ್–ಕಪಿಲ್ ದೇವ್ ಕಿಸ್!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

YOGEN SHAH Photography Instagram Post

ಬೆಂಗಳೂರು: ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘83‘ ಶುಕ್ರವಾರ ಡಿ. 24ರಂದು ತೆರೆಕಾಣುತ್ತಿದೆ.

ಚಿತ್ರದ ಪ್ರೀಮಿಯರ್ ಶೋ ಅನ್ನು ಬುಧವಾರ ರಾತ್ರಿ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಟ ರಣವೀರ್ ಸಿಂಗ್ ಮತ್ತು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ವೇದಿಕೆಯಲ್ಲೇ ಪರಸ್ಪರ ಚುಂಬಿಸಿದ್ದಾರೆ.

ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದಿರುವ ರೋಚಕ ಕಥೆಯನ್ನು ‘83‘ ಸಿನಿಮಾ ಹೊಂದಿದೆ.

ಕಪಿಲ್ ದೇವ್ ಮತ್ತು ರಣವೀರ್ ಸಿಂಗ್ ಅವರು ಪರಸ್ಪರ ಚುಂಬಿಸುತ್ತಿರುವ ಚಿತ್ರವನ್ನು ಫೋಟೊಗ್ರಾಫರ್ ಯೋಗೇನ್‌ ಶಾ ಸೆರೆ ಹಿಡಿದಿದ್ದಾರೆ.

ಇಬ್ಬರೂ ಪರಸ್ಪರ ಆಲಂಗಿಸಿ ಚುಂಬಿಸಿರುವ ಫೋಟೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

83 ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು