ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅರುವಾ’ದಲ್ಲಿ ಸೂರ್ಯನಿಗೆ ರಾಶಿ ಜೋಡಿ

Last Updated 4 ಮೇ 2020, 19:30 IST
ಅಕ್ಷರ ಗಾತ್ರ

ತಮಿಳು ನಿರ್ದೇಶಕ ಹರಿ ಅವರ ಮುಂದಿನ ಬಹುನಿರೀಕ್ಷಿತ, ತಮಿಳು ಸೂಪರ್‌ಸ್ಟಾರ್‌ ಸೂರ್ಯ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ‘ಅರುವಾ’ದ ನಾಯಕಿಯಾಗಿ ರಾಶಿ ಖನ್ನಾ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ.

ತೆಲುಗು ನಟಿ ರಾಶಿ ಖನ್ನಾ ‘ಇಮೈಕ್ಕ ನೋಡಿಗಲ್‌’ ಸಿನಿಮಾ ಮೂಲಕ ಕಾಲಿವುಡ್‌ಗೆ ಪ್ರವೇಶ ಮಾಡಿದ್ದರು. ಅನಂತರ ಅನೇಕ ಕಾಲಿವುಡ್‌ ಚಿತ್ರಗಳಲ್ಲಿ ನಟಿಸಿರುವ ಅವರು, ಈಗ ಈ ಚಿತ್ರದಲ್ಲಿ ಸೂರ್ಯ ಜೊತೆ ರೊಮ್ಯಾನ್ಸ್‌ ಮಾಡಲಿದ್ದಾರೆ.

ರಾಶಿ ಖನ್ನಾ ಕೂಡ ಈ ವಿಚಾರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ ‘ನಿಮ್ಮ ಮುಂದಿನ ಚಿತ್ರಗಳ ಬಗ್ಗೆ ತಿಳಿಸಿ’ ಎಂದು ಕೇಳಿಕೊಂಡಾಗ ‘ಅರನ್‌ ಮನೈ‌ 3’ ಹಾಗೂ ಹರಿ ಸರ್‌ ನಿರ್ದೇಶನದ ಸೂರ್ಯ ನಾಯಕನಾಗಿರುವ ಚಿತ್ರದಲ್ಲಿ ನಟಿಸಲಿದ್ದೇನೆ. ಎರಡೂ ಚಿತ್ರಗಳ ಬಗ್ಗೆ ಇನ್ನೂ ಚರ್ಚೆ ನಡೆದಿದೆ ಅಷ್ಟೇ. ಲಾಕ್‌ಡೌನ್‌ ಮುಗಿದ ನಂತರ ಇನ್ನಷ್ಟು ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದಿದ್ದರು.

ಈ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆದರೆ ಪೂಜಾ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದರು.

ನಿರ್ದೇಶಕ ಹರಿ ಹಾಗು ಸೂರ್ಯ ಜೊತೆಯಾಗಿ ಸಿದ್ಧಪಡಿಸುತ್ತಿರುವ ಆರನೇ ಚಿತ್ರ ಅರುವಾ. ಈ ಚಿತ್ರಕ್ಕೆ ಕೆ.ಇ. ಜ್ಞಾನವೇಲ್‌ ರಾಜ ತಮ್ಮ ಗ್ರೀನ್‌ ಸ್ಟುಡಿಯೊ ಬ್ಯಾನರ್‌ನಡಿ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಡಿ. ಇಮ್ಮನ್‌ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT