ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಚಂದ್ರನ್ ಪುತ್ರನ ‘ಮುಗಿಲ್‌ಪೇಟೆ’ 19ಕ್ಕೆ ತೆರೆಗೆ

ಚಿತ್ರ ಕುರಿತು ಮನೋರಂಜನ್ ಮಾಹಿತಿ
Last Updated 13 ನವೆಂಬರ್ 2021, 4:54 IST
ಅಕ್ಷರ ಗಾತ್ರ

ಶಿವಮೊಗ್ಗ: ನಟ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಚಿತ್ರ ’ಮುಗಿಲ್ ಪೇಟೆ’ ನ.19ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

‘ಈ ಚಿತ್ರ ನನ್ನ ಪಾಲಿಗೆ ಬಹುನಿರೀಕ್ಷೆಯ ಚಿತ್ರ. ಈಗಾಗಲೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡಬಹುದಾದ ಉತ್ತಮ ಕೌಟುಂಬಿಕ ಚಿತ್ರವಾಗಿದೆ. ಇಂಪಾದ ಹಾಡುಗಳು, ಸೊಗಸಾದ ಹೊರಾಂಗಣ ದೃಶ್ಯಗಳು, ನವಿರಾದ ಪ್ರೇಮ ಕಥೆ ಒಳಗೊಂಡಿದೆ. ಚಿತ್ರ ಯಶಸ್ವಿಯಾಗಲಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

‘ಭರತ್ ಎಸ್. ನಾವುಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಡೀ ಚಿತ್ರತಂಡದ ಶ್ರಮವಿದೆ. 90 ದಿನಗಳು ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮೊದಲಾದ ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ’ ಎಂದು ವಿವರ ನೀಡಿದರು.

ಸಂಬಂಧಗಳಿಗೆ ಬೆಲೆ ಕೊಡುವ ಒಂದು ಕುಟುಂಬ. ಸಂಬಂಧಗಳನ್ನು ಕಡೆಗಾಣಿಸುವ ಮತ್ತೊಂದು ಕುಟುಂಬ. ಈ ಎರಡು ಕುಟುಂಬದ ಎರಡು ಜೀವಗಳ ಮಧ್ಯೆ ಪ್ರೀತಿ ಹುಟ್ಟಿದಾಗ ಏನಾಗುತ್ತದೆ ಎಂಬುದೆ ‘ಮುಗಿಲ್ ಪೇಟೆ’ಯ ಕಥಾವಸ್ತು. ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಉತ್ತಮ ಹಾಸ್ಯ ಎಲ್ಲವೂ ಚಿತ್ರದಲ್ಲಿದೆ ಎಂದರು.

‘ಮೊದಲ ಬಾರಿಗೆ ನಟ ಸಾಧುಕೋಕಿಲ 17 ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ್ದ ಅನುಭವ ಅವಿಸ್ಮರಣೀಯ. ನಾಯಕಿ ಕಯಾದು ಲೋಹರ್ ಅವರ ಅಭಿನಯ ಸೊಗಸಾಗಿದೆ. ಚಿತ್ರದ ತುಣುಕು, ಹಾಡುಗಳನ್ನು ಅಪ್ಪ ಮೆಚ್ಚಿದ್ದಾರೆ’ ಎಂದು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT