ಶನಿವಾರ, ಆಗಸ್ಟ್ 13, 2022
27 °C

ಚೇತರಿಸಿಕೊಳ್ಳುತ್ತಿರುವ ನೃತ್ಯ ನಿರ್ದೇಶಕ ರೆಮೊ ಡಿಸೋಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಶುಕ್ರವಾರ ಹೃದಯಾಘಾತದಿಂದ ಮುಂಬೈನ ಕೋಕಿಲಾಬೆನ್‌ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಯಲ್ಲಿರುವ ರೆಮೊ ಫೋಟೊವನ್ನು ಅವರ ಸ್ನೇಹಿತರು ಹಾಗೂ ಮಡದಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟ ಆಮಿರ್ ಅಲಿ ರೆಮೊ ಅವರೊಂದಿಗಿನ ಆಸ್ಪತ್ರೆಯ ಫೋಟೊವನ್ನು ಹಂಚಿಕೊಂಡು ‘ದಿ ಸ್ಟ್ರಾಂಗೆಸ್ಟ್‌’ ಎಂದು ಬರೆದುಕೊಂಡಿದ್ದಾರೆ.

ಆಮಿರ್ ತ‌ಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಫೋಟೊದಲ್ಲಿ ರೆಮೊ ಹಿಂಭಾಗದಿಂದ ಪೋಸ್ ನೀಡಿದ್ದಾರೆ. ಡಾನ್ಸರ್ ಸುಶಾಂತ್ ಪೂಜಾರಿ ಕೂಡ ರೆಮೊ ಅವರ ಫೋಟೊವನ್ನು ಹಂಚಿಕೊಂಡಿದ್ದಾರೆ.

ಸೋಮವಾರ ರೆಮೊ ಹಾಡೊಂದಕ್ಕೆ ಕಾಲು ಕುಣಿಸುತ್ತಿರುವ ವಿಡಿಯೊವೊಂದನ್ನು ಪತ್ನಿ ಲೆಜೆಲ್ ಡಿಸೋಜಾ ಹಂಚಿಕೊಂಡಿದ್ದರು. ಅಲ್ಲದೇ ‘ಕಾಲಿನಲ್ಲಿ ನೃತ್ಯ ಮಾಡುವುದು ಒಂದು ವಿಷಯ. ಆದರೆ ಹೃದಯದಿಂದ ನೃತ್ಯ ಮಾಡುವುದೇ ಬೇರೆ. ನಿಮ್ಮ ಹಾರೈಕೆ ಹಾಗೂ ಆಶೀರ್ವಾದಗಳಿಗೆ ವಂದನೆಗಳು’ ಎಂದು ಬರೆದುಕೊಂಡಿದ್ದರು.

ಸಮಕಾಲೀನರಾದ ಗೀತಾ ಕೌರ್‌ ಹಾಗೂ ಟೆರೆನ್ಸ್ ಲೆವಿಸ್‌ ರೆಮೊ ಅವರಿಗೆ ಶೀಘ್ರಗುಣಮುಖರಾಗಿ ಎಂದು ಪೋಸ್ಟ್ ಹಾಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು