ಭಾನುವಾರ, ಆಗಸ್ಟ್ 1, 2021
23 °C

‘ರಿಚರ್ಡ್‌ ಆಂಟನಿ’ಗೆ ಎರಡೇ ದಿನದಲ್ಲಿ ಸಿಕ್ಕಿತು ಕೋಟಿ ವ್ಯೂವ್ಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಉಳಿದವರು ಕಂಡಂತೆ’ ಚಿತ್ರದ ಪೂರ್ವ ಭಾಗ ಹಾಗೂ ಮುಂದಿನ ಭಾಗದ ಕಥಾಹಂದರವುಳ್ಳ, ನಟ ರಕ್ಷಿತ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ‘ರಿಚರ್ಡ್‌ ಆಂಟನಿ’ ಚಿತ್ರದ ಟೀಸರ್‌ ಯೂಟ್ಯೂಬ್‌ನಲ್ಲಿ ಈಗಾಗಲೇ ಒಂದು ಕೋಟಿಗೂ ಅಧಿಕ ವ್ಯೂವ್ಸ್‌ ಪಡೆದಿದೆ. ಚಿತ್ರದ ಕುರಿತು ಜನರು ಸಾಕಷ್ಟು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಕ್ಷಿತ್‌ ಶೆಟ್ಟಿ, ‘ರಿಚರ್ಡ್‌ ಆಂಟನಿ’ ಉಳಿದವರು ಕಂಡಂತೆ ಚಿತ್ರದ ಎರಡನೇ ಅಧ್ಯಾಯ ಎನ್ನಬಹುದು. ಆದರೆ ಇದು ಸಂಪೂರ್ಣ ವಿಭಿನ್ನವೂ ಹೌದು. ಬಹಳ ವರ್ಷಗಳ ಹಿಂದೆ, ನಾನು ಉಳಿದವರು ಕಂಡಂತೆ ಬರೆದಾಗ ನನಗೆ ಕಿಂಚಿತ್ತೂ ಆಲೋಚನೆ ಇರಲಿಲ್ಲ ಮುಂದೊಂದು ದಿನ ಇದರ ಇನ್ನೊಂದು ಭಾಗ ಸ್ವತಃ ನಾನೇ ಮಾಡುತ್ತೇನೆ ಎಂದು. ಆದರೆ ಇವತ್ತು ಮತ್ತೆ ಕೈಗೆತ್ತಿಕೊಂಡಾಗ ಅನಿಸಿದ್ದು ಏನೆಂದರೆ, ಇದು ಅಂದೇ ಮೊಳಕೆಯೊಡೆದ ಪ್ರಬಂಧದ ನಿರ್ಣಯ. ಆಗ ಗಿಡದ ಎಲೆಯಷ್ಟು ಕಥೆಯನ್ನು ತೆರೆಯ ಮೇಲೆ ತರಲು ಅವಕಾಶ ನೀಡಿತ್ತು. ಕಥೆಗೆ ತಾಳ್ಮೆ ಬಹುಶಃ ಜಾಸ್ತಿ ಅನಿಸುತ್ತೆ, ಈಗ ಮರದ ಕೊಂಬೆಯಷ್ಟು ಹೇಳಲು ನನ್ನನ್ನು ತಯಾರು ಮಾಡಿದೆ. ಹೌದು ಮುಂದಿನ ಅಧ್ಯಾಯವನ್ನು ಆರಂಭ ಮಾಡುವ ಸಮಯ ಬಂದಾಗಿದೆ. ಆ ಅಧ್ಯಾಯದ ಒಂದು ಭಾಗವೇ , ‘ಮರುಬಂದನು ಅಲೆಗಳ ಜೊತೆ, ಕೆಂಪಾದವು ಕಡಲ ತೀರದ ಕಥೆ’ ಎಂದು ಹೇಳಿದ್ದಾರೆ. ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು