ಮಂಗಳವಾರ, ನವೆಂಬರ್ 24, 2020
22 °C

ಆಲಿಯಾಗಾಗಿ ವಿಶೇಷ ವ್ಯವಸ್ಥೆ ಮಾಡಿರುವ ಆರ್‌ಆರ್‌ಆರ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್. ಲಾಕ್‌ಡೌನ್ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಸಿನಿಮಾ ಶೂಟಿಂಗ್‌ ಅನ್ನು ಅಕ್ಟೋಬರ್‌ ಮೊದಲ ವಾರದಿಂದ ಪುನರಾರಂಭಿಸಲಾಗಿತ್ತು. ಇತ್ತೀಚೆಗೆ ಚಿತ್ರದ ಭೀಮ್‌ನ ಪಾತ್ರದ ಟೀಸರ್‌ ಕೂಡ ಬಿಡುಗಡೆ ಮಾಡಿದ್ದರು ರಾಜಮೌಳಿ. ಕೋಮರಾಮ್ ಭೀಮ್ ಪಾತ್ರದಲ್ಲಿ ತಾರಕ್‌ ಭಿನ್ನವಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ಮೂಡಿಸಿದ್ದರು, ಅಲ್ಲದೇ ಪಾತ್ರದ ಮೇಲೆ ಅಪಾರ ನಿರೀಕ್ಷೆ ಹುಟ್ಟುವಂತೆ ಟೀಸರ್ ರಚಿಸಲಾಗಿತ್ತು.

ಸದ್ಯ ಸುದ್ದಿಯ ಪ್ರಕಾರ ಬಾಲಿವುಡ್‌ ನಟಿ, ಆರ್‌ಆರ್‌ಆರ್ ಚಿತ್ರದ ನಾಯಕಿ ಆಲಿಯಾ ಭಟ್‌ ಇನ್ನೇನು ಹೈದರಾಬಾದ್‌ ಸೇರಲಿದ್ದಾರೆ. ಅಲ್ಲದೇ ತಮ್ಮ ನಟನೆಯ ಚಿತ್ರದ ಉಳಿದ ಭಾಗವನ್ನು ಪೂರ್ಣಗೊಳಿಸಲಿದ್ದಾರೆ. ಅವರ ಅಭಿನಯದ ಸಂಪೂರ್ಣ ಭಾಗದ ಶೂಟಿಂಗ್‌ ಅನ್ನು ರಾಮೋಜಿ ಫಿಲ್ಮ್‌ ಸಿಟಿಯಲ್ಲಿ ಮಾಡಲಾಗುತ್ತದೆ. ಆಲಿಯಾಗಾಗಿ ಸಿನಿಮಾ ತಂಡ ವಿಶೇಷ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆಯಂತೆ. ಆಕೆ ಚಿತ್ರದಲ್ಲಿನ ತಮ್ಮ ಭಾಗದ ಸಂಪೂರ್ಣ ಶೂಟಿಂಗ್‌ಗಾಗಿ ಒಂದು ತಿಂಗಳ ಕಾಲ ರಾಮೋಜಿ ಫಿಲ್ಮ್ ಸಿಟಿಯಲ್ಲೇ ಉಳಿದುಕೊಳ್ಳಲಿದ್ದಾರೆ. ಆ ಕಾರಣಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಈ ಚಿತ್ರದಲ್ಲಿ ಶ್ರೀಯಾ ಶರಣ್, ಅಜಯ್ ದೇವಗನ್‌, ಓಲಿವಿಯಾ ಮೋರಿಸ್ ಸೇರಿದಂತೆ ರಾಮ್ ಚರಣ್, ಜ್ಯೂನಿಯರ್ ಎನ್‌ಟಿಆರ್‌ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನವಿದೆ. ಈ ಸಿನಿಮಾ ತೆಲುಗು ಮಾತ್ರವಲ್ಲದೇ ಹಿಂದಿ, ಕನ್ನಡ, ಮಲೆಯಾಳಂ ಹಾಗೂ ತಮಿಳಿನಲ್ಲೂ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು