14ಕ್ಕೆ ‘ರುಸ್ತುಂ’ ಟ್ರೇಲರ್ ಬಿಡುಗಡೆ

ಬುಧವಾರ, ಏಪ್ರಿಲ್ 24, 2019
31 °C

14ಕ್ಕೆ ‘ರುಸ್ತುಂ’ ಟ್ರೇಲರ್ ಬಿಡುಗಡೆ

Published:
Updated:
Prajavani

‍‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ನಟನೆಯ ‘ರುಸ್ತುಂ’ ಚಿತ್ರದ ಟ್ರೇಲರ್ ಇದೇ 14ರಂದು ಬಿಡುಗಡೆಯಾಗಲಿದೆ. ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು.  

ಆದರೆ, ಒಂದೂವರೆ ದಶಕದ ಬಳಿಕ ಶಿವಣ್ಣ ನಟಿಸಿರುವ ರಿಮೇಕ್‌ ಚಿತ್ರ ‘ಕವಚ’ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿನ ಶಿವಣ್ಣ ಅವರ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಕವಚ ಕೌಟುಂಬಿಕ ಚಿತ್ರ. ಜೊತೆಗೆ, ಅದರಲ್ಲಿ ಸಾಮಾಜಿಕ ಸಂದೇಶವೂ ಇದೆ. ‘ರುಸ್ತುಂ’ ಪಕ್ಕಾ ಮಾಸ್‌ ಚಿತ್ರ. ಹಾಗಾಗಿ, ಎರಡೂ ಚಿತ್ರಗಳ ಪ್ರದರ್ಶನಕ್ಕೆ ಘರ್ಷಣೆಯಾಗದಂತೆ ಚಿತ್ರತಂಡಗಳು ಮುಂಜಾಗ್ರತೆವಹಿಸಿವೆ. ಮೇ ತಿಂಗಳ ಅಂತ್ಯದಲ್ಲಿ ‘ರುಸ್ತುಂ’ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ. 

ವಿವೇಕ್‌ ಒಬೆರಾಯ್, ಶ್ರದ್ಧಾ ಶ್ರೀನಾಥ್‌, ರಚಿತಾ ರಾಮ್‌, ಮಯೂರಿ ತಾರಾಗಣದಲ್ಲಿದ್ದಾರೆ. ಅನೂಪ್ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ. ಮಹೇನ್‌ ಸಿಂಹ ಅವರ ಛಾಯಾಗ್ರಹಣವಿದೆ. ಜಯಣ್ಣ– ಭೋಗೇಂದ್ರ ಬಂಡವಾಳ ಹೂಡಿದ್ದಾರೆ.  

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !