‘ಸಾಹೋ’ ಚಿತ್ರ ಶುಕ್ರವಾರ ತೆರೆಕಂಡಿದೆ. ಚಿತ್ರವು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಈವರೆಗೂ ಬಾಹುಬಲಿ ಗುಂಗಿನಲ್ಲಿದ್ದ ಪ್ರಭಾಸ್ ಅಭಿಮಾನಿಗಳು ಸಾಹೋ ಕಾಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಸಾಹೊ ಸದ್ದು ಜೋರಾಗಿದೆ. ಚಿತ್ರದ ಟೈಟಲ್ ಟ್ವಿಟರ್ನಲ್ಲಿ ಟ್ರೆಂಡ್ ಆಗಿದ್ದು, ‘ಇನ್ನೇನು ಕೆಲವೇ ನಿಮಿಷಗಳಲ್ಲಿ ಚಿತ್ರ ನೋಡುತ್ತಿದ್ದೇನೆ, ಸಿನಿಮಾ ಶುರುವಾಯಿತು, ಹೇಗಿರಬಹುದು ಆ್ಯಕ್ಷನ್ ದೃಶ್ಯಗಳು,...‘ ಹೀಗೆ ಹಲವು ಟ್ವೀಟ್ಗಳು ಹರಿದಾಡುತ್ತಿವೆ. ಪ್ರೀಮಿಯರ್ ಶೋ ನೋಡಿದವರು, ಬೆಳ್ಳಂಬೆಳಿಗ್ಗೆಯೇ ಸಿನಿಮಾ ಪ್ರದರ್ಶನ ಕಂಡವರು ಫೋಟೊಗಳನ್ನು ಪ್ರಕಟಿಸಿಕೊಳ್ಳುವ ಜತೆಗೆ ಅಭಿಪ್ರಾಯಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸಾಹೋ ಮೇಲೆ ಆರ್ಟ್ವರ್ಕ್ ಕದ್ದ ಆರೋಪ

ಭಾರೀ ಬಜೆಟ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ನಿರೀಕ್ಷೆಯೂ ಹೆಚ್ಚಿದೆ. ‘ಸಿನಿಮಾ ಪೂರ್ತಿ ಪ್ರಭಾಸ್ ಮಯ, ಕಥೆ, ಚಿತ್ರಕಥೆ ಎಂಥದ್ದೂ ಇಲ್ಲ..‘, ‘ನಿರ್ದೇಶಕರು ಇನ್ನೂ ಸರಿಯಾಗಿ ನಿರ್ವಹಿಸಬೇಕಿತ್ತು, ತುಂಬಾ ಗೊಂದಲ ಆಗುತ್ತೆ..‘, ‘ಮೊದಲಾರ್ಧ ತುಂಬಾ ಸ್ಲೋ..‘, ‘ನಿರೀಕ್ಷೆಯನ್ನು ತಲುಪಿಲ್ಲ..‘, ‘ಪ್ರಭಾಸ್ ತನ್ನ ಶೇ 100ರಷ್ಟು ಅರ್ಪಿಸಿದ್ದಾರೆ. ಇದು ಅದ್ಭುತ ದೃಶ್ಯ ವೈಭವ..‘ ಎಂದೆಲ್ಲ ವಿಮರ್ಶಿಸುವುದರಲ್ಲಿ ಸಿನಿಮಾ ಪ್ರಿಯರು ಮಗ್ನರಾಗಿದ್ದಾರೆ.

ಈಗಾಗಲೇ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾ ಸುಮಾರು 4500 ಸ್ಕ್ರೀನ್ಗಳಲ್ಲಿ ತೆರೆಕಂಡಿದೆ.

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ನ ನೀಲ್ ನಿತಿನ್ ಮುಕೇಶ್, ಜಾಕಿ ಶ್ರಾಫ್, ಮಂದಿರಾ ಬೇಡಿ, ಮಹೇಶ್ ಮಂಜ್ರೇಕರ್, ನರೇಂದ್ರ ಝಾ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಸುಜೀತ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮೊದಲ ದಿನ₹70 ಕೋಟಿ ಗಳಿಕೆ

ಮೊದಲ ದಿನವೇ ₹100 ಕೋಟಿ ಗಳಿಕೆ ಮಾಡುವ ಮೂಲಕ ಬಾಕ್ಸ್ ಆಫೀಸ್ನ ದಾಖಲೆ ಮುರಿಯಲಿದೆ ಎಂದು ಸಾಹೋ ಸಿನಿಮಾದ ಅಭಿಮಾನಿಗಳ ನಿರೀಕ್ಷೆಯಾಗಿತ್ತು.

ಆದರೆ ಈ ಸಿನಿಮಾ ಮೊದಲ ದಿನ ₹60ರಿಂದ ₹70 ಕೋಟಿ ಗಳಿಸಿದೆ ಎಂದು ಅಂದಾಜು ಮಾಡಲಾಗಿದೆ. ಇದು ಕೂಡ ಬಾಕ್ಸ್ ಆಫೀಸ್ನ ಹೊಸ ದಾಖಲೆಯಾಗಿದೆ.

‘ಥಕ್ಸ್ ಆಫ್ ಹಿಂದುಸ್ತಾನ್’ ಮೊದಲ ದಿನ ₹52 ಕೋಟಿ ಗಳಿಸಿತ್ತು. ಭಾರತ್ ಸಿನಿಮಾಮೊದಲ ದಿನ ₹42.30 ಕೋಟಿ ಬಾಚಿಕೊಂಡಿತ್ತು. ಸಾಹೋ ಸಿನಿಮಾ ದಕ್ಷಿಣ ಭಾರತದ ಪ್ರೇಕ್ಷಕರನ್ನು ಹೆಚ್ಚು ಸೆಳೆದಿದೆ. ಹಿಂದಿ ಪ್ರೇಕ್ಷಕರು ಕೂಡ ಮೊದಲ ದಿನವೇ ಸಿನಿಮಾ ನೋಡಲು ಕುತೂಹಲ ತೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.