ನಟಿ ಸಮಂತಾ ಅಕ್ಕಿನೇನಿ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿ ಮೂಲಕ ಡಿಜಿಟಲ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಲಿವುಡ್ ನಟ ಮನೋಜ್ ಬಾಜಪೇಯಿ ನಟಿಸಿದ್ದ ಈ ಸರಣಿಯ ಮೊದಲ ಭಾಗವಾದ ‘ದಿ ಫ್ಯಾಮಿಲಿ ಮ್ಯಾನ್’ ಪ್ರೇಕ್ಷಕರ ಮುಂದೆ ಸಾಕಷ್ಟು ಕುತೂಹಲಗಳನ್ನು ತೆರೆದಿಟ್ಟಿತ್ತು. ಹಾಗಾಗಿಯೇ, ಎರಡನೇ ಭಾಗದ ಮೇಲೂ ನಿರೀಕ್ಷೆಗಳು ದುಪ್ಪಟ್ಟುಗೊಂಡಿವೆ.

ಮೊದಲ ಭಾಗದಲ್ಲಿ ಮನೋಜ್ ಭಾಜಪೇಯಿ ಬೇಹುಗಾರ ಶ್ರೀಕಾಂತ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಮಧ್ಯಮವರ್ಗದ ವ್ಯಕ್ತಿಯೊಬ್ಬ ಬೇಹುಗಾರನಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿಯಡಿ ಕೆಲಸ ಮಾಡುವ ಪಾತ್ರವದು. ಅವರ ಪತ್ನಿ ಪಾತ್ರದಲ್ಲಿ ಅಭಿನಯಿಸಿದ್ದು ನಟಿ ಪ್ರಿಯಾಮಣಿ. ಹತ್ತು ಕಂತುಗಳಲ್ಲಿ ತೆರೆಕಂಡಿದ್ದ ಹಿಂದಿಯ ಈ ಸ್ಪೈ ಥ್ರಿಲ್ಲರ್ ವೆಬ್ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿತ್ತು.

ಬೇಹುಗಾರ ತನ್ನ ಸಂಸಾರ ಹಾಗೂ ವೃತ್ತಿಬದುಕನ್ನು ಸರಿದೂಗಿಸಲು ಹೆಣಗಾಟ ನಡೆಸುತ್ತಾನೆ. ಸಂಕಷ್ಟದ ನಡುವೆಯೇ ಹೇಗೆ ದೇಶದ್ರೋಹಿಗಳನ್ನು ಮಟ್ಟಹಾಕುತ್ತಾನೆ ಎನ್ನುವುದು ಈ ಸರಣಿಯ ತಿರುಳು. ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ರಾಜ್ ನಿಧಿಮೋರ್ ಮತ್ತು ಕೃಷ್ಣ ಡಿ.ಕೆ.

ಈಗಾಗಲೇ, ‘ದಿ ಫ್ಯಾಮಿಲಿ ಮ್ಯಾನ್ 2’ ಸರಣಿಯ ಶೂಟಿಂಗ್ ಪೂರ್ಣಗೊಂಡಿದೆ. ಮುಂಬೈನಲ್ಲಿ ಮನೋಜ್ ಭಾಜಪೇಯಿ ಡಬ್ಬಿಂಗ್ ನಿರತರಾಗಿದ್ದರೆ, ಹೈದರಾಬಾದ್ನಲ್ಲಿಸಮಂತಾ ಡಬ್ಬಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದಾರಂತೆ. ಆನ್‌ಲೈನ್‌ನಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಳಿಸುವುದು ವೆಬ್ ಸರಣಿ ತಂಡದ ನಿರ್ಧಾರ.

ಅಂದಹಾಗೆ ಸಮಂತಾ ಅವರದು ಇದರಲ್ಲಿ ನೆಗೆಟಿವ್ ಪಾತ್ರವಂತೆ. ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ನೆರವಾಗುವ ಸ್ಲೀಪರ್ ಏಜೆಂಟ್ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಅವರ ವೃತ್ತಿಬದುಕಿನಲ್ಲಿಯೇ ಇದು ವಿಶಿಷ್ಟವಾದ ಪಾತ್ರ ಎನ್ನಲಾಗುತ್ತಿದೆ. ಅವರ ಈ ಪಾತ್ರದೊಟ್ಟಿಗೆ ಭಾವನಾತ್ಮಕವಾದ ಫ್ಲಾಷ್‌ಬ್ಯಾಕ್ ಕಥೆಯೊಂದು ಬೆಸೆದುಕೊಂಡಿದೆಯಂತೆ. ಹಾಗಾಗಿಯೇ, ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಳ್ಳಲು ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನುವುದು ಟಾಲಿವುಡ್ ಅಂಗಳದ ಮಾತು.

ಸ್ಲೀಪರ್ ಏಜೆಂಟ್ ಪಾತ್ರದಲ್ಲಿ ಅವರದು ಅದ್ಭುತವಾದ ನಟನೆ. ಈ ಪಾತ್ರದ ಮೂಲಕ ಉತ್ತರ ಭಾರತದಲ್ಲೂ ಅವರ ಅಭಿಮಾನಿಗಳ ಸಂಖ್ಯೆ ವೃದ್ಧಿಸಲಿದೆ ಎನ್ನುವುದು ತಂಡದ ಅಂಬೋಣ. ಈ ಸರಣಿಯು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸರಣಿಯ ಮೂರನೇ ಭಾಗವೂ ಬರಲಿದೆ ಎಂಬ ಸುದ್ದಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.