ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ: ಭಾವನಾತ್ಮಕ ಪಯಣದ ‘ಫಾದರ್‌’

Published 3 ಮೇ 2024, 4:39 IST
Last Updated 3 ಮೇ 2024, 4:39 IST
ಅಕ್ಷರ ಗಾತ್ರ

‘ಆರ್‌.ಸಿ. ಸ್ಟುಡಿಯೊಸ್‌’ನಡಿ ನಿರ್ದೇಶಕ ಆರ್‌.ಚಂದ್ರು ನಿರ್ಮಾಣ ಮಾಡುತ್ತಿರುವ ‘ಫಾದರ್‌’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಹಾಗೂ ಗೀತಾ ಶಿವರಾಜ್‌ಕುಮಾರ್ ಕ್ಲ್ಯಾಪ್‌ ಮಾಡುವ ಮುಖಾಂತರ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದರು.

ಹೊಸ ಪ್ರಾಜೆಕ್ಟ್‌ಗೆ ಶುಭಕೋರಿದ ಶಿವರಾಜ್‌ಕುಮಾರ್‌, ‘ಆರ್. ಚಂದ್ರು ನನ್ನ ಆತ್ಮೀಯರು. ಅವರ ನಮ್ಮ ಬಾಂಧವ್ಯ ಯಾವಾಗಲೂ ಇರುತ್ತದೆ. ನಮ್ಮಿಬ್ಬರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಸುದ್ದಿಗಳು ಸುಳ್ಳು. ಸಾಮಾಜಿಕ ಮಾಧ್ಯಮಗಳು ಇಂದು ಆಟದ ವಸ್ತುವಾಗಿಬಿಟ್ಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ’ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ರಾಜ್‌ ಮೋಹನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಫಾದರ್‌’ ಸಿನಿಮಾದಲ್ಲಿ ‘ಲವ್‌ ಮಾಕ್ಟೇಲ್‌’ ಖ್ಯಾತಿಯ ಡಾರ್ಲಿಂಗ್‌ ಕೃಷ್ಣ ಹಾಗೂ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಕೃಷ್ಣನಿಗೆ ಅಮೃತಾ ಅಯ್ಯಂಗಾರ್‌ ಜೋಡಿಯಾಗಿದ್ದಾರೆ. ತೆಲುಗಿನ ಖ್ಯಾತ ನಟ ಸುನೀಲ್‌ ಸೇರಿದಂತೆ ಅನೇಕ ಪರಭಾಷೆ ನಟ, ನಟಿಯರ ದಂಡೇ ಈ ಚಿತ್ರದಲ್ಲಿದೆ. 

‘ಫಾದರ್‌’ ಸಿನಿಮಾಗಾಗಿ ನನ್ನ ನಿರ್ದೇಶನದ ಸಿನಿಮಾಗಳನ್ನೂ ಮುಂದೂಡಿದ್ದೇನೆ ಎಂದ ಆರ್‌. ಚಂದ್ರು, ‘ಈ ಸಿನಿಮಾಗೆ ಭಾಷೆಯ ಗಡಿ ಇಲ್ಲ’ ಎಂದಿದ್ದಾರೆ. 

‘ಈ ಸಿನಿಮಾದ ಕಥೆಯನ್ನು ನಾನು, ಮಿಲನಾ ಜೊತೆಯಾಗಿಯೇ ಕೇಳಿದ್ದೆವು. ಅದೊಂದು ಅದ್ಭುತವಾದ ವಿಷಯವನ್ನು ಒಳಗೊಂಡಿತ್ತು. ಕಥೆಯು ನನ್ನನ್ನು ಸೆಳೆದಿತ್ತು. ‘ಈ ಸಿನಿಮಾ ನೀನು ಮಾಡಲೇಬೇಕು’ ಎಂದು ನಿರ್ದೇಶಕರ ಮುಂದೆಯೇ ಮಿಲನಾ ಹೇಳಿದಳು. ಈ ಸಿನಿಮಾ ಖಂಡಿತವಾಗಿಯೂ ಬಹಳ ವರ್ಷ ನೆನಪಿನಲ್ಲಿ ಉಳಿಯಲಿದೆ. ನನ್ನ ಸಿನಿಪಯಣದಲ್ಲಿ ಇದೊಂದು ಭಿನ್ನವಾದ ಸಿನಿಮಾ ಆಗಿರಲಿದೆ. ಇದೊಂದು ಭಾವನಾತ್ಮಕ, ಫ್ಯಾಮಿಲಿ ಡ್ರಾಮಾ. ಚಂದ್ರು ಅವರ ಜೊತೆಗೆ ನನ್ನ ಮೊದಲ ಸಿನಿಮಾವಿದು. ಇದು ನನ್ನ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ’ ಎನ್ನುತ್ತಾರೆ ಡಾರ್ಲಿಂಗ್‌ ಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT