ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುಐ’ಗೆ ಕಾಯುತ್ತಿದ್ದವರಿಗೆ 'ಎ' ಕೊಟ್ಟ ಉಪ್ಪಿ!

Published 13 ಮೇ 2024, 11:40 IST
Last Updated 13 ಮೇ 2024, 11:40 IST
ಅಕ್ಷರ ಗಾತ್ರ

ಉಪೇಂದ್ರ ಅಭಿಮಾನಿಗಳು ‘ಯುಐ’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ಪ್ರಶ್ನಿಸುತ್ತಿದ್ದರೆ ಇತ್ತ ರಿಯಲ್‌ ಸ್ಟಾರ್‌ ಹೊಸ ಸುದ್ದಿ ನೀಡಿದ್ದಾರೆ. ‘ಎ’ ಸಿನಿಮಾ ಮೇ 17ರಂದು ರಿರಿಲೀಸ್‌ ಆಗಲಿದೆ ಎಂದು ಉಪೇಂದ್ರ ಟ್ವೀಟ್‌ ಮಾಡಿದ್ದಾರೆ. 

‘ಯುಐ’ ಸಿನಿಮಾ ವಿಎಫ್‌ಎಕ್ಸ್‌ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ತಿಳಿಸಿದ್ದರು. 2022ರ ಜೂನ್‌ನಲ್ಲಿ ಸೆಟ್ಟೇರಿದ್ದ ಈ ಸಿನಿಮಾ ಇದೇ ಜೂನ್‌ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಈ ನಡುವೆ ಮೇ 17ರಂದು ಬೆಂಗಳೂರಿನ ‘ಪ್ರಸನ್ನ’ ಥಿಯೇಟರ್‌ ಸೇರಿದಂತೆ ರಾಜ್ಯದಾದ್ಯಂತ ‘ಎ’ ರಿರಿಲೀಸ್‌ ಆಗಲಿದೆ ಎಂದಿದ್ದಾರೆ ಉಪೇಂದ್ರ. 

ವರ್ಷದ ಮೊದಲಾರ್ಧದಲ್ಲಿ ಇಲ್ಲಿಯವರೆಗೆ ಶಿವರಾಜ್‌ಕುಮಾರ್‌ ನಟನೆಯ ‘ಕರಟಕ ದಮನಕ’ ಹೊರತುಪಡಿಸಿ, ಸ್ಟಾರ್‌ ನಟರ ಸಿನಿಮಾಗಳೇ ಬಿಡುಗಡೆಯಾಗಿಲ್ಲ. ಕಳೆದ ಮಾರ್ಚ್‌ 15ರಂದು ಪುನೀತ್‌ ರಾಜ್‌ಕುಮಾರ್‌ ನಟನೆಯ ಹಿಟ್‌ ಸಿನಿಮಾ ‘ಜಾಕಿ’ ರಿರಿಲೀಸ್‌ ಆಗಿತ್ತು. ಇದಾದ ಬಳಿಕ ಕಳೆದ ಶುಕ್ರವಾರ(ಮೇ 10) ಪುನೀತ್‌ ನಟನೆಯ ‘ಪವರ್‌’ ಹಾಗೂ ‘ಅಂಜನಿಪುತ್ರ’ ರಿರಿಲೀಸ್‌ ಆದವು. ಬೆನ್ನಲ್ಲೇ ‘ಎ’ ಸಿನಿಮಾವನ್ನು ಮತ್ತೆ ತೆರೆಗೆ ತರುತ್ತಿದ್ದಾರೆ ಉಪೇಂದ್ರ. ಆ.15ಕ್ಕೆ ಶಿವರಾಜ್‌ಕುಮಾರ್‌ ನಟನೆಯ ‘ಭೈರತಿ ರಣಗಲ್‌’ ಬಿಡುಗಡೆಯಾಗುತ್ತಿದೆ. ಅಲ್ಲಿಯವರೆಗೆ ಸ್ಟಾರ್‌ ನಟರ ಸಿನಿಮಾಗಳು ಇಲ್ಲಿಯವರೆಗೂ ಘೋಷಣೆಯಾಗಿಲ್ಲ. ಈ ಅವಧಿಯಲ್ಲಿ ಅದೆಷ್ಟು ಸಿನಿಮಾಗಳು ರಿರಿಲೀಸ್‌ ಆಗಲಿವೆ ಎಂದು ಕಾದುನೋಡಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT