ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಕುಟುಂಬ ಸಮೇತ’ದ ಸಂಗಾತಿ ಬಂದಳು...

Last Updated 1 ಮೇ 2022, 9:10 IST
ಅಕ್ಷರ ಗಾತ್ರ

ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಸಕುಟುಂಬ ಸಮೇತ’ ಚಿತ್ರದ ಮೊದಲ ಹಾಡು ಸಂಗಾತಿ... ಇದೀಗ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಮಿದುನ್ ಮುಕುಂದನ್ ರಾಗ ಸಂಯೋಜನೆ ಇದೆ. ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯ ಇದೆ.

ಮೇ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.

ಎರಡು ಕುಟುಂಬಗಳ ಕಥೆ ಚಿತ್ರದಲ್ಲಿದೆ. ಮದುವೆ ನಡೆಯುವಾಗ ಏನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದಲ್ಲಿದೆ. ಎರಡು ಕುಟುಂಬಗಳ ನಡುವಿನ ಗತ್ತು, ಅಂತಸ್ತಿನ ವ್ಯತ್ಯಾಸ, ಪ್ರದರ್ಶನ... ಇದರಿಂದಾಗಿ ಮದುವೆಯ ಮೇಲಾಗುವ ಪರಿಣಾಮ ಏನು ಎಂಬುದನ್ನು ಈ ಚಿತ್ರ ಹೇಳಿದೆ ಎಂದಿದೆ ಚಿತ್ರತಂಡ.

ಅಚ್ಯುತ್‌ ಕುಮಾರ್‌, ಕೃಷ್ಣ ಹೆಬ್ಬಾಳೆ, ಭರತ್‌ ಜಿ.ಬಿ. ಸಿರಿ ರವಿಕುಮಾರ್‌, ಪುಷ್ಪಾ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್‌ ತಾರಾಗಣದಲ್ಲಿದ್ದಾರೆ. ರಾಹುಲ್‌ ಪಿ.ಕೆ. ಮತ್ತು ಪೂಜಾ ಸುಧೀರ್‌ ಅವರ ಕಥೆಯಿದೆ. ಕರಂ ಚಾವ್ಲಾ ಮತ್ತು ಸಂದೀಪ್‌ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT