ಭಾನುವಾರ, ಜೂಲೈ 5, 2020
27 °C

ದತ್‌ ಸಿನಿಮಾ ಚಿತ್ರೀಕರಣ ಜುಲೈನಲ್ಲಿ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚಿತ್ರೀಕರಣ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿದರೆ, ನಟ ಸಂಜಯ್‌ ದತ್‌ ಅಭಿನಯದ ಹೊಸ ಚಿತ್ರ ‘ಬ್ಲಾಕ್‌ಬಸ್ಟರ್‌ ಗ್ಯಾಂಗ್‌’ ಜುಲೈ ತಿಂಗಳಲ್ಲಿ ಸೆಟ್ಟೇರಲಿದೆ. ಈ ವಿಚಾರವನ್ನು ಚಿತ್ರದ ನಿರ್ಮಾಪಕ ಸಂದೀಪ್‌ ಎಸ್‌. ಸಿಂಗ್‌ ಅವರು ತಿಳಿಸಿದ್ದಾರೆ. 

ಇದು ಕಾಮಿಡಿ, ಆ್ಯಕ್ಷನ್,‌ ಡ್ರಾಮಾ ಸಿನಿಮಾವಾಗಿದ್ದು, ಇದರಲ್ಲಿ ಸಂಜಯ್‌ ದತ್‌ ನಾಯಕನಾಗಿ ನಟಿಸಲಿದ್ದಾರೆ. ಮೂರು ಡಾನ್‌ಗಳು ಹಾಗೂ ಅವರ ಗ್ಯಾಂಗ್‌ ಸುತ್ತ ಚಿತ್ರಕತೆ ಹೆಣೆಯಲಾಗಿದೆ. ಈ ಚಿತ್ರಕ್ಕೆ ಸಂಜಯ್‌ ದತ್‌ ಹಾಗೂ ಆನಂದ್‌ ಪಂಡಿತ್‌ ಅವರು ಸಹ ಬಂಡವಾಳ ಹೂಡಿದ್ದಾರೆ. ಲಾಕ್‌ಡೌನ್‌ ತೆರವಾದ ನಂತರ ಜುಲೈ– ಆಗಸ್ಟ್‌ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲು ತಂಡ ಯೋಜನೆ ಹಾಕಿಕೊಂಡಿದೆ. ಈ ಚಿತ್ರದ ಪಾತ್ರವರ್ಗದ ಬಗ್ಗೆ ಸದ್ಯವೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. 

‘ಮುನ್ನಭಾಯ್‌ ಎಂಬಿಬಿಎಸ್’‌ ಚಿತ್ರದಲ್ಲಿ ಸಂಜಯ್‌ ದತ್‌ ಜೊತೆಗೆ ತೆರೆ ಹಂಚಿಕೊಂಡಿದ್ದ ಅರ್ಷದ್‌ ವಾರ್ಸಿ ಕೂಡ ಹೊಸ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. 

‘ಹೌಸ್‌ಫುಲ್’‌ ಸರಣಿ ಸಿನಿಮಾ ಖ್ಯಾತಿಯ ಸಾಜೀದ್‌ ಹಾಗೂ ಫರ್ಹಾದ್‌ ಈ ಚಿತ್ರಕ್ಕೆ ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಅಜಯ್‌ ಅರೋರ ಹಾಗೂ ಲೋವಲ್‌ ಅರೋರ ನಿರ್ದೇಶಿಸಲಿದ್ದಾರೆ. 

ಈ ಹೊಸ ಚಿತ್ರದ ಚಿತ್ರೀಕರಣವು ಮುಂಬೈ ಹಾಗೂ ಗೋವಾದಲ್ಲಿ ನಡೆಯಲಿದೆ. ‘ಬ್ಲಾಕ್‌ಬಸ್ಟರ್‌ ಗ್ಯಾಂಗ್’‌ ಸಿನಿಮಾದ ಚಿತ್ರೀಕರಣವನ್ನು ಈ ಹಿಂದೆ ಬುಡಾಪೆಸ್ಟ್‌ ಹಾಗೂ ಮಾರಿಷಸ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವು. ಆದರೆ ಕೊರೊನಾ ವೈರಸ್‌ ಸೋಂಕು ಭಯದಿಂದ ಲಾಕ್‌ಡೌನ್‌ ಘೋಷಣೆಯಾದ ನಂತರ ಸ್ಥಳ ಬದಲಾವಣೆ ಮಾಡಿಕೊಂಡೆವು’ ಎಂದು ಸಂದೀಪ್‌ ಎಸ್‌. ಸಿಂಗ್‌ ಹೇಳಿದ್ದಾರೆ.  ಈ ಚಿತ್ರವನ್ನು 2021ರಲ್ಲಿ ಬಿಡುಗೊಡೆಗೊಳಿಸುವುದು ಚಿತ್ರತಂಡದ ಯೋಜನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು