ಮುಂಬೈ: ಬಾಲಿವುಡ್ ನಟಿಯರು ತೆರೆ ಮೇಲೆ ಸ್ನೇಹಿತೆಯರಾಗಿ ಕಾಣಿಸಿಕೊಂಡ ಹಾಗೆ ಆಫ್-ಸ್ಕ್ರೀನ್ನಲ್ಲಿ ಸ್ನೇಹಿತೆಯರಾಗಿರುವುದನ್ನು ನಾವು ಅಷ್ಟಾಗಿ ನೋಡುವುದಿಲ್ಲ. ಆದರೆ, ಆ ಮಾತಿಗೆ ಅಪವಾದವೆಂಬಂತೆ ಸೈಫ್ ಅಲಿಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್ ಮತ್ತು ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಒಟ್ಟೊಟ್ಟಿಗೆ ವರ್ಕೌಟ್ ಮಾಡುವ ಮೂಲಕ ಸ್ನೇಹ ಪ್ರದರ್ಶಿಸಿದ್ದಾರೆ.

ಹಿಂದಿ ಚಲನಚಿತ್ರೋದ್ಯಮದ ಸಮಕಾಲೀನ ನಟಿಯರಾಗಿರುವ ಸಾರಾ ಮತ್ತು ಜಾಹ್ನವಿ ಇತ್ತೀಚೆಗೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾಗ ಹೊರಾಂಗಣದಲ್ಲಿ ಸೆಲೆಬ್ರಿಟಿ ಟ್ರೈನರ್ ನಮ್ರತಾ ಪುರೋಹಿತ್ ಅವರ ಸೂಚನೆ ಮೇರೆಗೆ ವರ್ಕೌಟ್ ಮಾಡಿದ್ದಾರೆ.

ಈ ವಿಡಿಯೊವನ್ನು ಸಾರಾ ಅಲಿ ಖಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಗೋ ವಿತ್ ದಿ ಫ್ಲೋ.. ಸ್ಲೋ ಅಂಡ್ ಸ್ಟಡಿ’ ಎಂದು ಶೀರ್ಷಿಕೆ ನೀಡಿದ್ದಾರೆ.

ಸಾರಾ ಅಲಿಖಾನ್ ಕೆಂಪು ಮತ್ತು ಕಪ್ಪು ವರ್ಣದ ಉಡುಪು ತೊಟ್ಟಿದ್ದರೆ, ಜಾಹ್ನವಿ ಕಿತ್ತಳೆ ಬಣ್ಣದ ಉಡುಪಿನಲ್ಲಿ ಬೆವರಿಳಿಸುವ ಮೂಲಕ ಯುವ ಹೃದಯಗಳಿಗೆ ಕಿಚ್ಚು ಹಚ್ಚಿದ್ದಾರೆ.

ಇದನ್ನೂ ಓದಿ..ಇನ್ಸ್ಟಾಗ್ರಾಮಲ್ಲಿ ಜಾಹ್ನವಿ ಕಪೂರ್ ಬೆಲ್ಲಿ ಡ್ಯಾನ್ಸ್ ಮೋಡಿ

ಇತ್ತೀಚೆಗೆ, ಬೆಲ್ಲಿ ಡ್ಯಾನ್ಸ್ ವಿಡಿಯೊ ಪೋಸ್ಟ್ ಮಾಡುವ ಮೂಲಕ ಜಾಹ್ನವಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.