ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ

Last Updated 16 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ನಗರಗಳ ಸಿಗ್ನಲ್‌ಗಳಲ್ಲಿ ವಾಹನ ನಿಲ್ಲಿಸಿಕೊಂಡು ಇದ್ದಾಗ, ಪುಟ್ಟ ಕಂದಮ್ಮಗಳ ಕೈಗಳು ಸಹಾಯ ಯಾಚಿಸುವುದುಂಟು. ಅವರು ಸ್ವಲ್ಪ ಕಾಸು ಅಥವಾ ಆಹಾರವನ್ನು ಕೇಳುತ್ತಾರೆ. ಆದರೆ, ಗುಂಡು ಮುಖದ, ಒಳ್ಳೊಳ್ಳೆ ಬಟ್ಟೆ ತೊಟ್ಟ ಪುಟಾಣಿಗಳು ತಮ್ಮ ಮೊಬೈಲ್‌ಗೆ ‘ಡೇಟಾ ಕೊಡಿ ಅಂಕಲ್, ಡೇಟಾ ಕೊಡಿ ಆಂಟಿ’ ಎಂದು ಯಾಚಿಸಿದರೆ?!

ಇಂಥದ್ದೊಂದು ಪರಿಕಲ್ಪನೆ ಇಟ್ಟುಕೊಂಡು, ‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸೃಜನ್ ಲೋಕೇಶ್ ಮತ್ತು ಮೇಘನಾ ರಾಜ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಕಥೆ ಇರುವುದು ಅಪ್ಪ–ಅಮ್ಮನಿಂದ ಆರಂಭವಾಗಿ ಚಿಕ್ಕ ಮಕ್ಕಳವರೆಗೂ ವ್ಯಾಪಿಸಿರುವ ಮೊಬೈಲ್‌ ಗೀಳಿನ ಕುರಿತು. ಇತ್ತೀಚೆಗೆ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

ಮಧುಚಂದ್ರ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ಒಟ್ಟು ನಲವತ್ತು ಜನ ಸೇರಿ ನಿರ್ಮಾಣ ಮಾಡಿದ್ದಾರೆ. ‘ಮೊಬೈಲ್‌ ಗೀಳಿನಿಂದ ಆಗುವ ಅಪಾಯ ಏನು ಎಂಬುದನ್ನು ಈ ನಿರ್ಮಾಪಕರೆಲ್ಲ ತಮ್ಮ ಮನೆಗಳಲ್ಲೇ ಕಂಡಿದ್ದಾರೆ’ ಎಂದು ಚಿತ್ರತಂಡ ಹೇಳಿದೆ.

ತಮ್ಮ ಸಿನಿಮಾ ಬಗ್ಗೆ ತಮಾಷೆಯ ಧಾಟಿಯಲ್ಲಿ ವಿವರಣೆ ನೀಡಿದ ಸೃಜನ್, ‘ಇಂದಿನ ದಿನಗಳಲ್ಲಿ ದಂಪತಿ ಒಬ್ಬರನ್ನೊಬ್ಬರು ತಾವು ಹೇಗಿದ್ದೇವೆ ಎಂದು ನೋಡಿಕೊಳ್ಳುವುದಿಲ್ಲ. ಅದರ ಬದಲು, ತಮ್ಮ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ, ಅವಕ್ಕೆ ಎಷ್ಟು ಲೈಕ್‌ಗಳು, ಕಮೆಂಟ್‌ಗಳು ಬರುತ್ತವೆ ಎಂದು ಕಾಯುತ್ತ ಕುಳಿತಿರುತ್ತಾರೆ. ಇಂಥ ಪ್ರವೃತ್ತಿಯ ಬಗ್ಗೆ ಈ ಸಿನಿಮಾ’ ಎಂದರು.

‘ಈ ಚಿತ್ರವು ಕನ್ನಡದಲ್ಲಿ ಒಂದು ಮೈಲಿಗಲ್ಲಾಗುತ್ತದೆ. ಈ ಮಾತನ್ನು ನನಗೆ ಚಿತ್ರ ವೀಕ್ಷಿಸಿದ ಕೆಲವರು ಹೇಳಿದ್ದಾರೆ’ ಎಂದು ನಟ ಸುಂದರ್ ರಾಜ್ ಹೇಳುತ್ತಾರೆ. ‘ಎಲ್ಲರೂ ಅನುಭವಿಸುತ್ತಿರುವ ವಿಷಯ ಈ ಚಿತ್ರದಲ್ಲಿದೆ. ಹಾಗಾಗಿ ಇದೊಂದು ಸಂಪೂರ್ಣ ಮನರಂಜನೆಯ ಸಿನಿಮಾ’ ಎನ್ನುವುದು ಮೇಘನಾ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT