ನವದೆಹಲಿ:  ಟೈಮ್ಸ್ ನಿಯತಕಾಲಿಕೆಯ ‘100 ಪ್ರಭಾವಿ ವ್ಯಕ್ತಿ’ಗಳ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಅಮೆರಿಕನ್ ಮೂಲದ ಈ ನಿಯತಕಾಲಿಕೆ ನಡೆಸುವ ಈ ವಾರ್ಷಿಕ ಸಮೀಕ್ಷೆಯಲ್ಲಿ ಓದುಗರು ಪ್ರಭಾವಿ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಾರೆ. ಈ ಸಮೀಕ್ಷೆಯಲ್ಲಿ ಒಟ್ಟು 12 ಲಕ್ಷ ಮತಗಳಲ್ಲಿ ಶಾರುಖ್ ಖಾನ್ ಅವರು ಶೇ 4 ರಷ್ಟು ಮತ ಗಳಿಸಿದ್ದಾರೆ

ದೇಶದ ಇಸ್ಲಾಮಿಕ್ ಆಡಳಿತದ ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದ ಇರಾನ್ ಮಹಿಳೆಯರು ಶೇ 3 ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.

ಜನವರಿಯಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ಅವರ ಪಠಾಣ್ ಚಿತ್ರವು ಯಶಸ್ಸು ಕಂಡಿದೆ. 4 ವರ್ಷಗಳ ನಂತರ ಶಾರುಖ್ ತೆರೆಮೇಲೆ ಕಾಣಿಸಿಕೊಂಡ ಈ ಸಿನಿಮಾ ಜಗತ್ತಿನಾದ್ಯಂತ ಬರೋಬ್ಬರಿ ₹1,000 ಕೋಟಿ ಗಳಿಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.