ಮಂಗಳವಾರ, ಏಪ್ರಿಲ್ 13, 2021
32 °C

‘ಊಪಿರಿ’ ರಿಮೇಕ್‌ನಲ್ಲಿ ಶಾರುಖ್‌ ಖಾನ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಲು ಸಾಲು ಸಿನಿಮಾಗಳು ಹೀನಾಯ ಸೋಲು ಕಂಡಿದ್ದರಿಂದ ಸದ್ಯಕ್ಕೆ ನಟನೆಯಿಂದ ಕೊಂಚ ಕಾಲ ಬ್ರೇಕ್‌ ಪಡೆಯುವ ನಿರ್ಧಾರವನ್ನು ಶಾರುಕ್‌ ಈಚೆಗೆ ಹೇಳಿಕೊಂಡಿದ್ದರು. ಇದೀಗ ತಮ್ಮ ಹಳೆ ಫಾರ್ಮ್‌ಗೆ ಮರಳಲು ತೆಲುಗು ಚಿತ್ರದ ರಿಮೇಕ್‌ನಲ್ಲಿ ನಟಿಸಲು ಅವರು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಗಾಳಿಸುದ್ದಿ ಹರಡಿದೆ. 

ಇತ್ತೀಚೆಗೆ ತೆಲುಗಿನ ಹಿಟ್‌ ಸಿನಿಮಾಗಳ ಮೇಲೆ ಬಾಲಿವುಡ್‌ ಕಣ್ಣು ನೆಟ್ಟಿದ್ದು, ಅಲ್ಲಿನ ನಟರು ಹಾಗೂ ನಿರ್ದೇಶಕರು ಟಾಲಿವುಡ್‌ನ ಹಿಟ್‌ ಚಿತ್ರಗಳನ್ನು ಬಾಲಿವುಡ್‌ಗೆ ರಿಮೇಕ್‌ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಶಾಹೀದ್‌ ಕಪೂರ್‌ ಅಭಿನಯದ ಕಬೀರ್‌ ಸಿಂಗ್‌. ಈಗ ಟಾಲಿವುಡ್‌ನ ಮತ್ತೊಂದು ಸಿನಿಮಾ ಮೇಲೆ ಬಾಲಿವುಡ್‌ನ ಸೂಪರ್‌ಸ್ಟಾರ್‌ ಕಣ್ಣು ಹಾಕಿದ್ದು, ಈ ಸಿನಿಮಾ ತನಗೆ ಗೆಲುವು ನೀಡಬಹುದು ಎಂಬ ನಿರೀಕ್ಷೆ ಅವರದು. ಆದರೆ ಈ ಚಿತ್ರ ಯಾವುದು ಎಂಬುದು ಇನ್ನೂ ಗೊತ್ತಾಗಿಲ್ಲ. 

ಈಗ ಶಾರುಖ್‌ ಯಾವ ಚಿತ್ರದ ರಿಮೇಕ್‌ನಲ್ಲಿ ನಟಿಸಬಹುದು ಎಂಬ ಊಹೆ ಬಾಲಿವುಡ್‌ನಲ್ಲಿ ಆರಂಭವಾಗಿದೆ. ಮೂಲಗಳ ಪ್ರಕಾರ ನಾಗಾರ್ಜುನ, ಕಾರ್ತಿ, ತಮನ್ನಾ ತಾರಾಗಣದ ತೆಲುಗು ಬ್ಲಾಕ್‌ಬಸ್ಟರ್‌ ‘ಊಪಿರಿ’ ಚಿತ್ರದ ಹಿಂದಿ ರಿಮೇಕ್‌ನಲ್ಲಿ ಶಾರುಕ್‌ ನಟಿಸಲಿದ್ದಾರೆ. ದಿ ಇನ್‌ಟಚೆಬಲ್ಸ್‌ ಎಂಬ ಫ್ರೆಂಚ್‌ ಚಲನಚಿತ್ರದ ತೆಲುಗು ರಿಮೇಕ್‌ ಊಪಿರಿ. ಆದರೆ ಇದು ನಿಜವೇ ಎಂದು ಎಲ್ಲೂ ಶಾರುಕ್‌ ಬಾಯ್ಬಿಟ್ಟಿಲ್ಲ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು