ಶನಿವಾರ, ಸೆಪ್ಟೆಂಬರ್ 18, 2021
31 °C

ಶೃಂಗಾರವು ಅಶ್ಲೀಲತೆಗಿಂತ ಭಿನ್ನ: ಪತಿಯ ಸಮರ್ಥನೆಗೆ ಮುಂದಾದರೇ ಶಿಲ್ಪಾ ಶೆಟ್ಟಿ?

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಹಾಟ್‌ಶಾಟ್ಸ್ ಆ್ಯಪ್‌ನ ನಿಖರವಾದ ಕಂಟೆಂಟ್‌ ಬಗ್ಗೆ ತಮಗೆ ತಿಳಿದಿಲ್ಲ ಎಂದು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ನೀಡಿರುವ ಈ ಹೇಳಿಕೆ ಬಗ್ಗೆ ಮುಂಬೈನ ಪೊಲೀಸ್‌ ಮೂಲಗಳು ತಿಳಿಸಿವೆ ಎಂದು ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ರಾಜ್ ಕುಂದ್ರಾ ಅವರ ವಿಯಾನ್ ಇಂಡಸ್ಟ್ರೀಸ್ ಲಂಡನ್ ಮೂಲದ ಕೆನ್ರಿನ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಕೆನ್ರಿನ್‌ ಸಂಸ್ಥೆಯು 'ಹಾಟ್‌ ಶಾಟ್ಸ್' ಎಂಬ ಆ್ಯಪ್‌ ಹೊಂದಿದ್ದು, ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಬಿಡುಗಡೆ ಮಾಡುತ್ತಿತ್ತು ಎಂಬ ಆರೋಪವಿದ..

'ಹಾಟ್‌ಶಾಟ್ಸ್ ಆ್ಯಪ್‌ನ ನಿಖರವಾದ ಕಂಟೆಂಟ್‌ ಬಗ್ಗೆ ನನಗೆ ತಿಳಿದಿಲ್ಲ. ಹಾಟ್‌ಶಾಟ್ಸ್ ಜೊತೆಗೆ ನಾನು ಯಾವುದೇ ಸಂಬಂಧ ಹೊಂದಿಲ್ಲ. ಶೃಂಗಾರವು ಅಶ್ಲೀಲತೆಗಿಂತ ಭಿನ್ನವಾದುದು. ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ತಯಾರಿಸುವಲ್ಲಿ ಭಾಗಿಯಾಗಿಲ್ಲ' ಎಂದು ಶಿಲ್ಪಾ ಶೆಟ್ಟಿ ಮುಂಬೈ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಕುಂದ್ರಾ ಅವರನ್ನು ಜುಲೈ 19 ರ ರಾತ್ರಿ ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಕುಂದ್ರಾ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 27 ರವರೆಗೆ ಮುಂಬೈನ ನ್ಯಾಯಾಲಯ ವಿಸ್ತರಿಸಿದೆ.

ಇವುಗಳನ್ನೂ ಓದಿ...

ಅಶ್ಲೀಲ ಚಿತ್ರ ಮತ್ತು ಬೆಟ್ಟಿಂಗ್‌: ವ್ಯಾವಹಾರಿಕ ವಿವಾದಗಳಲ್ಲಿ 'ರಾಜ್ ಕುಂದ್ರಾ'

ನಟಿಗೆ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದ ರಾಜ್‌ ಕುಂದ್ರಾ?

ಜೈಲಲ್ಲಿ ಕೊಳೆಯಲಿ: ರಾಜ್‌ ಕುಂದ್ರಾಗೆ ಯೂಟ್ಯೂಬ್‌ ಸ್ಟಾರ್‌ ಶಾಪ ಹಾಕಿದ್ದೇಕೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು