‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಮರ್ಯಾದೆ ಪ್ರಶ್ನೆ’, ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಸಿನಿಮಾಗಳಲ್ಲಿ ನಟಿಸಿದ್ದ ಬಿಗ್ಬಾಸ್ ಖ್ಯಾತಿಯ ನಟ ಶೈನ್ ಶರಶ್ ಶೆಟ್ಟಿ, ‘ಜಸ್ಟ್ ಮ್ಯಾರೀಡ್’ ಸಿನಿಮಾ ಮೂಲಕ ನಾಯಕನಾಗಿ ಬೆಳ್ಳಿತೆರೆಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಇದೀಗ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಅವರೇ ಬರೆದಿರುವ ಕಥೆಯನ್ನು ‘ಮಿಥ್ಯ’ ಸಿನಿಮಾ ನಿರ್ದೇಶಕ ಸುಮಂತ್ ಭಟ್ ನಿರ್ದೇಶಿಸಿದ್ದು, ‘ಶಂಕರಾಭರಣ’ ಎಂಬ ಶೀರ್ಷಿಕೆಯಡಿ ಸಿನಿಮಾ ತೆರೆಗೆ ಬರಲಿದೆ. ‘ಶಂಕರಾಭರಣ’ ಎಂಬ ಬಸ್ಸಿನ ಸುತ್ತಮುತ್ತ ಸಾಗುವ ಕಥೆ ಇವರ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಶೈನ್ ಶೆಟ್ಟಿಯೇ ನಟಿಸಿದ್ದು, ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾ ಬಗ್ಗೆ ಶೈನ್ ಮಾತಿಗಿಳಿದರು.

‘ಹಲವು ವರ್ಷಗಳ ಹಿಂದಿನಿಂದಲೇ ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಆಸೆ ಇತ್ತು. ಆದರೆ ನಿರ್ಮಾಣಕ್ಕೆ ಇಳಿಯುವ ಮುನ್ನ ಈ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಿತ್ತು. ಹೀಗಾಗಿ ನಟನಾಗಿ ಕೆಲಸ ಮಾಡುವಾಗ ನಿರ್ಮಾಣದ ಬಗ್ಗೆ ತಿಳಿದುಕೊಂಡೆ. 2017ರಿಂದಲೂ ಸಿನಿಮಾ ನಿರ್ಮಾಣ ಮಾಡಬೇಕು ಎನ್ನುವ ಹೋರಾಟದಲ್ಲಿ ಇದ್ದೆ. ಒಂದು ನಿರ್ಮಾಣ ಸಂಸ್ಥೆ ಎಂದು ಆರಂಭಿಸಿದ ಮೇಲೆ ಸರಣಿಯಾಗಿ ಸಿನಿಮಾಗಳು ಬರುತ್ತಿರಬೇಕು. ಹೀಗಾಗಿ ಮೂರು ಕಥೆಗಳನ್ನು ಬರೆದುಕೊಂಡು ಹಲವರನ್ನು ಸಂಪರ್ಕಿಸಿದ್ದೆ. ಈ ಸಂದರ್ಭದಲ್ಲಿ ನನಗೆ ನಮ್ಮೂರಿನವರೇ ಆದ ದಿವಾಕರ್ ಶೆಟ್ಟಿ ಜೊತೆಯಾದರು. ಈ ಮೂಲಕ 2024ರಲ್ಲಿ ‘ರಂಗಸ್ಥಳ ಸ್ಟುಡಿಯೊಸ್’ ಹುಟ್ಟುಹಾಕಿದೆವು. ಮೂರು ಕಥೆಗಳ ಪೈಕಿ ಇದೀಗ ‘ಶಂಕರಾಭರಣ’ ಕೈಗೆತ್ತಿಕೊಂಡಿದ್ದೇನೆ’ ಎನ್ನುತ್ತಾ ನಿರ್ಮಾಣ ಕ್ಷೇತ್ರಕ್ಕಿಳಿದ ಕಥೆ ಬಿಚ್ಚಿಟ್ಟರು.

‘ಸುಮಂತ್ ಭಟ್ ಅವರ ಜೊತೆ ‘ಏಕಂ’ ಎನ್ನುವ ವೆಬ್ಸರಣಿ ಮಾಡಿದ್ದೆ. ಈ ಸಂದರ್ಭದಲ್ಲೇ ನನಗೆ ‘ಶಂಕರಾಭರಣ’ದ ಕಲ್ಪನೆ ಹೊಳೆದಿತ್ತು. ಇದಾದ ಬಳಿಕ ಕಥೆ ಸಿದ್ಧಪಡಿಸಿಕೊಂಡು ಸುಮಂತ್ ಭಟ್ ಅವರಿಗೆ ನಿರ್ದೇಶಿಸಲು ಕೇಳಿದ್ದೆ. ಆರಂಭದಲ್ಲಿ ಅವರು ‘ಮಿಥ್ಯ’ ಜಾನರ್ನ ಸಿನಿಮಾಗಳನ್ನೇ ಮಾಡುವ ಮನಃಸ್ಥಿತಿಯಲ್ಲಿದ್ದರು. ಬಳಿಕ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳಲು ಅವರು ಮುಂದಾದಾಗ ಒಪ್ಪಿಕೊಂಡರು. ಸಿನಿಮಾಗೆ ಸುಮಂತ್ ಹಾಗೂ ತ್ರಿಲೋಕ್ ತ್ರಿವಿಕ್ರಮ್ ಸಂಭಾಷಣೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನವಿದೆ’ ಎಂದರು ಶೈನ್.

‘ಸಿನಿಮಾದ ಜಾನರ್ ಬಗ್ಗೆ ಸದ್ಯಕ್ಕೆ ಗುಟ್ಟುಬಿಟ್ಟುಕೊಡುವುದಿಲ್ಲ. ಇದು ಕರಾವಳಿ ಭಾಗದ ಉಡುಪಿ–ಕುಂದಾಪುರದಲ್ಲಿ ನಡೆಯುವ ಕಥೆ. ‘ಶಂಕರಾಭರಣ’ ಎನ್ನುವುದು ನಮ್ಮ ತಂದೆ ಕಾಲದಲ್ಲಿ ಬಹಳ ಹಿಟ್ ಆದ ಸಿನಿಮಾ. ಇದಕ್ಕೆ ಸಂಬಂಧಪಟ್ಟ ಹೆಸರುಗಳು ಸಿನಿಮಾದಲ್ಲಿದೆ. ಜೊತೆಗೆ ಒಂದು ಬಸ್ಸಿನ ಹಾಗೂ ಅದಕ್ಕೆ ಸಂಬಂಧಪಟ್ಟ ಚಾಲಕ–ನಿರ್ವಾಹಕರು, ಅವರ ಕುಟುಂಬದ ಸುತ್ತ ಸುತ್ತುವ ಕಥೆಯಾಗಿದೆ. ಶಂಕರನ ಆಭರಣ ಎಂದೂ ಹೇಳಬಹುದು’ ಎನ್ನುತ್ತಾ ಕಥೆಯ ಸಣ್ಣ ಸುಳಿವು ನೀಡಿ ಮಾತಿಗೆ ವಿರಾಮವಿತ್ತರು ಶೈನ್.

ಇತ್ತೀಚೆಗಷ್ಟೇ ಚಿತ್ರದ ಶೂಟಿಂಗ್ ಸಂಪೂರ್ಣವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಬಿಡುಗಡೆ ದಿನಾಂಕವನ್ನು ಚರ್ಚಿಸಿ ನಿರ್ಧರಿಸುತ್ತೇವೆ.
–ಶೈನ್ ಶೆಟ್ಟಿ, ನಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.