‘ಪಡ್ಡೆಹುಲಿ’ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಕೈಯಲ್ಲೀಗ ಅನೇಕ ಸಿನಿಮಾಗಳಿವೆ. ಈಗಾಗಲೇ ‘ವಿಷ್ಣುಪ್ರಿಯ’ ಸಿನಿಮಾ ಮುಗಿಸಿದ್ದಾರೆ ಶ್ರೇಯಸ್. ಈ ಚಿತ್ರವನ್ನು 2021ಕ್ಕೆ ಬಿಡುಗಡೆ ಮಾಡುವ ತಯಾರಿಯೂ ನಡೆಯುತ್ತಿದೆ. ಹೀಗಿರುವಾಗಲೇ ಒಂದರ ಹಿಂದೆ ಒಂದರಂತೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೇಯಸ್, ಮುಂದಿನ ವರ್ಷ ಪೂರ್ತಿ ಬ್ಯುಸಿಯೋ ಬ್ಯುಸಿ!

ಹೌದು, ಜನವರಿ ಅಂತ್ಯಕ್ಕೆ ಶ್ರೇಯಸ್ ನಟನೆಯ ಮಾಸ್ ಮನರಂಜನೆ ಕಥಾಹಂದರವುಳ್ಳ ಸಿನಿಮಾವೊಂದು ಸೆಟ್ಟೇರಲಿದೆ. ಸ್ನೇಹ, ಪ್ರೀತಿಯ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶ್ರೇಯಸ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಡ್ಡೆಹುಲಿ ಸಿನಿಮಾ ನೋಡಿ ಇಷ್ಟಪಟ್ಟು ಈ ಚಿತ್ರ ಮಾಡಲು ಮುಂದೆ ಬಂದಿದ್ದಾರೆ ತಮಿಳು ಮತ್ತು ಮಲಯಾಳಂ ನಿರ್ಮಾಪಕ ರವಿಕುಮಾರ್. ಈ ಚಿತ್ರದ ನಾಯಕಿ ಮತ್ತು ತಾಂತ್ರಿಕ ವರ್ಗದ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ಇನ್ನು ಇದರ ಜತೆಗೆ ತಮಿಳಿನ ಕಥೆಗಾರರೊಬ್ಬರು ಹೇಳಿದ ಕಥೆಯನ್ನೂ ಶ್ರೇಯಸ್ ಕೇಳಿದ್ದು, ಆ ಕಥೆ ಕೇಳಿಯೇ ಫಿದಾ ಆಗಿದ್ದಾರೆ. ಎಲ್ಲ ಭಾಷೆಗಳಿಗೆ ಸಲ್ಲುವ ಕಥೆ ಇದಾಗಿರುವುದರಿಂದ ಕೆ. ಮಂಜು ಅವರೇ ತಮ್ಮ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಈ ಸಿನಿಮಾ ಮಾಡುವ ಯೋಜನೆ ನಡೆಯುತ್ತಿದೆ. ಹುಡುಗ, ಹುಡುಗಿ ಮದುವೆ ಆಗುವುದಕ್ಕೂ ಮುಂಚೆ ಹೇಗಿರಬೇಕು, ಮದುವೆ ಆದ ಬಳಿಕ ಹೇಗಿರಬೇಕು ಎಂಬ ಎಳೆ ಈ ಚಿತ್ರದ್ದು. 10 ರಿಂದ 12 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿರುವುದರಿಂದ ಮಾರ್ಚ್ ಅಂತ್ಯದ ವೇಳೆಗೆ ಈ ಸಿನಿಮಾ ಶುರುವಾಗಲಿದೆ.

ಈ ಎರಡು ಸಿನಿಮಾ ಒಂದು ಹಂತಕ್ಕೆ ಬರುತ್ತಿದ್ದಂತೆ ಮಲಯಾಳಂ ನಿರ್ದೇಶಕರ ಚಿತ್ರದಲ್ಲಿಯೂ ಶ್ರೇಯಸ್ ನಟಿಸಲಿದ್ದಾರೆ. ಈ ಸಿನಿಮಾ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದ್ದು, ಅಂಡರ್‌ವರ್ಲ್ಡ್ ಕಥಾಹಂದರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ. ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗುತ್ತದೆ.

ಈ ಮೂರು ಸಿನಿಮಾಗಳ ಮಾಹಿತಿ ಒಂದೆಡೆಯಾದರೆ, ಈಗಾಗಲೇ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಜತೆಗೆ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡಿದ ಕೆ. ಮಂಜು ‘ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ, ಚಿತ್ರಮಂದಿರಗಳು ಮೊದಲಿನಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಈಗಾಗಲೇ ನಾನೇ ಹಲವು ಬಾರಿ ಸಿನಿಮಾ ವೀಕ್ಷಣೆ ಮಾಡಿದ್ದೇನೆ. ತುಂಬ ಚೆನ್ನಾಗಿ ಮೂಡಿ ಬಂದಿದೆ. ಹಾಗಾಗಿ ಮುಂದಿನ ವರ್ಷಕ್ಕೆ ಚಿತ್ರಮಂದಿರದಲ್ಲಿಯೇ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಇತ್ತ ಇನ್ನೂ ಮೂರು ಸಿನಿಮಾಗಳು ಶ್ರೇಯಸ್ ಬಳಿ ಇದ್ದು, ಒಂದೊಂದಾಗಿಯೇ ಘೋಷಣೆ ಆಗಲಿವೆ’ ಎಂದು ಮಾಹಿತಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.