ಬುಧವಾರ, ಡಿಸೆಂಬರ್ 11, 2019
27 °C

ಶ್ವೇತಾ ನಿರಂಜನ್‌ಗೆ ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್ ಕಿರೀಟ

Published:
Updated:
Deccan Herald

ಜೈಪುರದಲ್ಲಿ ಈಚೆಗೆ ನಡೆದ ‘ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್’ ಸ್ಪರ್ಧೆಯಲ್ಲಿ ಬೆಂಗಳೂರಿನ ಬೆಡಗಿ ಶ್ವೇತಾ ನಿರಂಜನ್ ಜಯಗಳಿಸಿದ್ದಾರೆ. ಶ್ವೇತಾ ಗೃಹಿಣಿಯಷ್ಟೇ ಅಲ್ಲ ಕಲಾವಿದೆಯೂ ಹೌದು. ಎಂಟು ವರ್ಷದ ಪುತ್ರ ಕೃತಿನ್ ಶ್ವೇತಾ ಅವರ ಕಲೆಗೆ ಸ್ಫೂರ್ತಿ.

ರೂಪದರ್ಶಿಯೂ ಆಗಿರುವ ಶ್ವೇತಾ, ಶಾಸ್ತ್ರೀಯ, ಸಾಲ್ಸಾ ಮೊದಲಾದ ನೃತ್ಯಪ್ರಕಾರಗಳನ್ನು ಬಲ್ಲ ಬಹುಮುಖ ಪ್ರತಿಭೆ.  ಸೌಂದರ್ಯದ ಜತೆಗೆ ಗಮನ ಸೆಳೆಯುವ ವ್ಯಕ್ತಿತ್ವವನ್ನೂ ಹೊಂದಿರುವ ಶ್ವೇತಾ, ಕುಟುಂಬಕ್ಕೆ ಆದ್ಯತೆ ನೀಡುವ ಜತೆಗೆ ಸ್ವಾವಲಂಬಿ ಜೀವನದ ಕಡೆಗೂ ಗಮನ ಹರಿಸಿದ್ದಾರೆ. ಶ್ವೇತಾ ಅವರ ಸಾಧನೆಗೆ ತಂದೆ, ತಾಯಿ, ಸೋದರಿ ಬೆನ್ನೆಲುಬಾಗಿದ್ದಾರೆ.

‘ನನ್ನೆಲ್ಲಾ ಉತ್ತಮ ಕೆಲಸಗಳಿಗೆ ಪೋಷಕರ ಸಹಕಾರವಿದೆ. ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಮುಖ್ಯವಾಗಿ ಪ್ರೇರಣೆ ನೀಡಿದ್ದು ಸ್ಪರ್ಧಾ ಕಾರ್ಯಕ್ರಮದ ರಾಷ್ಟ್ರೀಯ ನಿರ್ದೇಶಕಿ ಜಸ್ಪ್ರೀತ್ ಮತ್ತು ನಂದಿನಿ ನಾಗರಾಜ್. ಅವರ ಸಹಕಾರ ಯಶಸ್ಸು ಸಾಧಿಸಲು ಸಹಕಾರಿಯಾಯಿತು ಎನ್ನುವ ಶ್ವೇತಾ, ವ್ಯಕ್ತಿತ್ವ ವಿಕಸನಕಾರ ಅಲೋಕ್ ಶರ್ಮಾ ಅವರ ಪ್ರೋತ್ಸಾಹವನ್ನೂ ಸ್ಮರಿಸುತ್ತಾರೆ.

ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಗ್ಲೋಬಲ್ ಪ್ರೆಕ್ಯೂರ್‌ಮೆಂಟ್‌ ಮ್ಯಾನೇಜರ್ ಆಗಿ ಶ್ವೇತಾ ಸ್ಕೇಟಿಂಗ್, ಈಜು, ಕುದುರೆ ಸವಾರಿ, ಗಾಲ್ಫ್, ಮಾಡೆಲಿಂಗ್, ಫಿಟ್ನೆಸ್, ಯೋಗ, ನೃತ್ಯದಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ‘ಮಿಸೆಸ್ ಇಂಡಿಯಾ ವರ್ಲ್ಡ್‌ ವೈಡ್’ ಸ್ಪರ್ಧೆಯಲ್ಲಿ ವಿಜೇತರಾಗಿರುವ ಶ್ವೇತಾ 2019ರಲ್ಲಿ ಸಿಂಗಾಪುರದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯಮಟ್ಟ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು