ಶಿವಕಾರ್ತಿಕೇಯನ್ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಮಿಸ್ಟರ್ ಲೋಕಲ್’ ಕಾರ್ಮಿಕರ ದಿನದಂದು ಬಿಡುಗಡೆಯಾಗಬೇಕಿದೆ. ಸೈಂಟಿಫಿಕ್ ಫಿಕ್ಷನ್ ಚಿತ್ರವೊಂದರ ಚಿತ್ರೀಕರಣ ಈಗಷ್ಟೇ ಪ್ಯಾಕಪ್ ಆಗಿದೆ.ಆದರೆ ಅಷ್ಟರಲ್ಲೇ ಶಿವು ಹೊಸ ಚಿತ್ರದ ಕತೆ ಕೇಳಿ ಸಹಿ ಮಾಡಿದ್ದಾರೆ.

ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಪಾಂಡಿರಾಜ್ ತಮ್ಮ ಹೊಸ ಚಿತ್ರಕ್ಕೆ ಶಿವಕಾರ್ತಿಕೇಯನ್ ಅವರೇ ನಾಯಕನಟರಾಗಬೇಕು ಎಂದು ಪಟ್ಟುಹಿಡಿದು ಒಪ್ಪಿಸಿದ್ದಾರೆ. ತಾತ್ಕಾಲಿಕವಾಗಿ ‘ಎಸ್‌ಕೆ 16’ ಎಂಬ ಶೀರ್ಷಿಕೆಯನ್ನೂ ಪಾಂಡಿರಾಜ್ ನೋಂದಾಯಿಸಿಕೊಂಡಾಗಿದೆ. ಎಸ್‌ಕೆ ಎನ್ನುವುದು ಶಿವಕಾರ್ತಿಕೇಯನ್ ಹೆಸರಿನಿಂದ ಎತ್ತಿಕೊಂಡ ಎರಡಕ್ಷರಗಳ ಜೋಡಣೆಯೇ ಎಂಬುದು ಕಾಲಿವುಡ್ ಮಂದಿಯ ವಾದ.

ಶಿವು ಕಾಲ್‌ಶೀಟ್‌ಗೆ ಸಹಿ ಹಾಕಿದ್ದಾಗಿದೆ. ಆದರೆ ನಾಯಕನಟಿಯೂ ಸೇರಿದಂತೆ ಚಿತ್ರತಂಡದ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. 2012ರಲ್ಲಿ ‘ಮರೀನಾ’ ಎಂಬ ಚಿತ್ರದ ಮೂಲಕ ಶಿವಕಾರ್ತಿಕೇಯನ್ ಅವರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದವರೇ ಪಾಂಡಿರಾಜ್. ಹಾಗಾಗಿ ಗಾಡ್‌ಫಾದರ್ ಮನವಿಗೆ ಇಲ್ಲವೆನ್ನದೆ ಶಿವು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಪಾಂಡಿರಾಜ್ ಅವರ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಲಿದೆ.ಮುಂದಿನ ವರ್ಷ ಪೊಂಗಲ್ ಹಬ್ಬಕ್ಕೆ ಈ ಚಿತ್ರ ಬಿಡುಗಡೆಯಾಗಬೇಕು ಎಂಬುದು ನಿರ್ದೇಶಕರ ಲೆಕ್ಕಾಚಾರ. ಕಾರ್ತಿ ಅಭಿನಯದ ‘ಕಾಡೈಕುಟ್ಟಿ ಸಿಂಗಂ’ ನಂತರ ಪಾಂಡಿರಾಜ್ ಕೈಗೆತ್ತಿಕೊಂಡಿರುವ ಚಿತ್ರ ‘ಎಸ್‌ಕೆ 16’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.