ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನೀಕಾಂತ್ ಪುತ್ರಿಗೆ ಸೆಕೆಂಡ್ ಮ್ಯಾರೇಜ್!

Last Updated 27 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಸೂಪರ್‌ಸ್ಟಾರ್ ರಜನೀಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಎರಡನೇ ಮದುವೆಗೆ ಸಜ್ಜಾಗಿದ್ದಾರಂತೆ!

ಹೌದು, ಹೀಗೊಂದು ಗಾಸಿಪ್ ಕಾಲಿವುಡ್‌ನ ಅಂಗಳದಲ್ಲಿ ಕೇಳಿಬಂದಿದ್ದು, ಅದಕ್ಕೆ ಪೂರಕವೆಂಬಂತೆ ಅಲ್ಲಿನ ಕೆಲ ಮಾಧ್ಯಮಗಳೂ ವರದಿ ಮಾಡಿವೆ.

ಉದ್ಯಮಿ ಅಶ್ವಿನ್ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದ ಸೌಂದರ್ಯ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಶ್ವಿನ್ ಜೊತೆಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಅವರು, ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರವಾಗಿದ್ದರು. ಅವರಿಗೆ ಐದು ವರ್ಷದ ಮಗ ವೇದ್ ಸಹ ಇದ್ದಾನೆ.

ನಿರ್ದೇಶಕಿಯೂ ಆಗಿರುವ ಸೌಂದರ್ಯ, ವಿಶಾಗನ್ ಎಂಬುವರ ಜೊತೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಉದ್ಯಮಿಯೂ ಆಗಿರುವ ವಿಶಾಗನ್, ತಮಿಳು ಚಿತ್ರರಂಗದ ನಟ ಸಹ ಹೌದು.

ಅಶ್ವಿನ್ ಜೊತೆಗಿನ ಸಂಬಂಧ ಮುರಿದು ಬಿದ್ದ ಬಳಿಕ ಸೌಂದರ್ಯ ಒಂಟಿಯಾಗಿಯೇ ಇದ್ದರು. ಈಚೆಗೆ ಅವರಿಗೆ ವಿಶಾಗನ್ ಮೇಲೆ ಪ್ರೀತಿ ಹುಟ್ಟಿಕೊಂಡಿದೆಯಂತೆ. ಹೀಗಾಗಿಯೇ, ಅವರಿಬ್ಬರಿಗೆ ಕುಟುಂಬಸ್ಥರು ಮದುವೆ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅವರಿಬ್ಬರ ನಿಶ್ಚಿತಾರ್ಥ ಈಗಾಗಲೇ ಆಗಿದೆ ಎನ್ನಲಾಗಿದ್ದು, ಜನವರಿಯಲ್ಲಿ ಮದುವೆ ಆಗಲಿದ್ದಾರಂತೆ. ಈ ಬಗ್ಗೆ ಸೌಂದರ್ಯ ಆಗಲಿ ಅಥವಾ ವಿಶಾಗನ್ ಆಗಲಿ ಇದುವರೆಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅವರ ಕುಟುಂಬಸ್ಥರು ಖಚಿತ ಪಡಿಸಿಲ್ಲ.

ವಿಶಾಗನ್ ಅವರಿಗೆ ಈಗಾಗಲೇ ಕನಿಕಾ ಕುಮಾರನ್ ಎಂಬುವವರ ಜೊತೆ ವಿವಾಹವಾಗಿತ್ತು. ಅವರಿಬ್ಬರೂ ಈಚೆಗೆ ದೂರವಾಗಿದ್ದರು. ವಿಶಾಗನ್ ಅವರಿಂದ ದೂರವಾದ ಕನಿಕಾ ಸಿನಿಮಾ ನಿರ್ಮಾಪಕ ವರುಣ್ ಮಣಿಯನ್ ಎಂಬುವರನ್ನು ವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT