ಭಾನುವಾರ, ಆಗಸ್ಟ್ 25, 2019
23 °C

ಪತ್ನಿ ಕನಸು ನನಸಾಗಿಸಿದ ಬೋನಿ

Published:
Updated:
Prajavani

‘ಈಗ ನಾನು ನನ್ನ ಪತ್ನಿಯ ಕನಸನ್ನು ನನಸಾಗಿಸಿದೆ’ ಎಂದು ನಿರ್ಮಾಪಕ ಬೋನಿ ಕಪೂರ್‌ ಹೇಳಿಕೊಂಡಿದ್ದಾರೆ. 

ಬೋನಿ ಕಪೂರ್‌ ಪತ್ನಿ ಶ್ರೀದೇವಿಯ ಕನಸಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ‘ನೆರಕೊಂಡ ಪರವೈ’ ಚಿತ್ರದ ಮೂಲಕ ಅದನ್ನು ಈಡೇರಿಸಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ವಿಷಯ ಏನಪ್ಪಾ ಅಂದ್ರೆ, ‘ಇಂಗ್ಲಿಷ್‌ ವಿಂಗ್ಲಿಷ್‌’ ತಮಿಳು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಶ್ರೀದೇವಿ, ಅಜಿತ್‌ ನಟನೆಯ ತಮಿಳು ಸಿನಿಮಾವೊಂದನ್ನು ಪತಿ ಬೋನಿ ಕಪೂರ್‌ ನಿರ್ಮಾಣ ಮಾಡಬೇಕು ಎಂದು ಬಯಸಿದ್ದರಂತೆ.

ಬಾಲಿವುಡ್‌ನಲ್ಲಿ ತೆರೆಕಂಡು ಹಿಟ್ ಆಗಿದ್ದ ‘ಪಿಂಕ್’ ಚಿತ್ರವು ತಮಿಳಿಗೆ ‘ನೆರಕೊಂಡ ಪರವೈ’ ಹೆಸರಿನಲ್ಲಿ ರಿಮೇಕ್‌ ಆಗುತ್ತಿದೆ. ಈ ಚಿತ್ರ ಆಗಸ್ಟ್‌ 8ರಂದು ಬಿಡುಗಡೆಯಾಗಲಿದೆ. ಮೂಲ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ತಮಿಳಿನಲ್ಲಿ ಅಜಿತ್ ನಿರ್ವಹಿಸಿದ್ದಾರೆ. ಇದರ ನಿರ್ಮಾಪಕ ಬೋನಿ ಕಪೂರ್‌.

‘ಸಿಂಗಾಪುರದಲ್ಲಿ ಇವತ್ತು ನೆರಕೊಂಡ ಪರವೈ ಚಿತ್ರದ ಪ್ರೀಮಿಯರ್‌ ಷೋ ನಡೆಯಿತು. ನನಗೆ ನನ್ನ ಪತ್ನಿಯ ಕನಸೊಂದನ್ನು ನನಸಾಗಿಸಿದ ತೃಪ್ತಿ ಇದೆ. ನಟ ಅಜಿತ್‌ ಕುಮಾರ್‌, ನಿರ್ದೇಶಕ ವಿನೋದ್‌ ಬೆಂಬಲ ಇಲ್ಲದೇ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಧನ್ಯವಾದ ಹೇಳಿದ್ದಾರೆ. 

ನಟಿ ವಿದ್ಯಾಬಾಲನ್‌ ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿದ್ದಾರೆ. 

Post Comments (+)