ಸುಯಿಧಗ ಸಿನಿಮಾ ಟ್ರೇಲರ್‌ ಬಿಡುಗಡೆ

7

ಸುಯಿಧಗ ಸಿನಿಮಾ ಟ್ರೇಲರ್‌ ಬಿಡುಗಡೆ

Published:
Updated:

ಶರತ್‌ ಕತ್ರೀಯಾ ನಿರ್ದೇಶನದ ‘ಸುಯಿಧಗ’ ಚಿತ್ರದ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. 

ಚಿತ್ರದಲ್ಲಿ ನಟ ವರುಣ್‌ ಧವನ್‌, ನಟಿ ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕುಶಲಕರ್ಮಿಗಳ ಮತ್ತು ಸ್ವಂತ ಉದ್ಯೋಗ, ಸ್ವಾಭಿಮಾನಿ ಜೀವನದ ಸುತ್ತಾ ಕಥೆ ಬೆಳಕು ಚೆಲ್ಲಿದೆ.

ಚಿತ್ರ ಕಥೆ ಮೌಜಿಕಾ ಮತ್ತು ಮಮ್ತಾ ದಂಪತಿಯನ್ನು ಸುತ್ತುವರೆದಿದೆ. ಅವರಿಬ್ಬರೂ ಕಸೂತಿ ಕಲೆಯನ್ನು ಭಾರತದಾದ್ಯಂತ ಯಾವ ರೀತಿ ಪರಿಚಯಿಸುತ್ತಾರೆ ಎನ್ನುವುದು ಚಿತ್ರದ ವಿಶೇಷವಾಗಿದೆ.

ಚಿತ್ರ ಇದೇ ಸೆಪ್ಟೆಂಬರ್‌ 28ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ಚಿತ್ರ ಸ್ವಲ್ಪ ಹಾಸ್ಯದ ರೀತಿಯಲ್ಲೂ ಜೀವನ ಪಾಠ ಕಲಿಸುವ ರೀತಿಯಲ್ಲಿದೆ. ಸುಯಿಧಗ ಸಣ್ಣ ನಗರವಾಗಿದ್ದು ಅಲ್ಲಿಯ ಕಸೂತಿ ಕಲೆಯನ್ನು ಭಾರತದಾದ್ಯಂತ ಪರಿಚಯಿಸುತ್ತಾರೆ. ಅನೇಕ ನಿರುದ್ಯೋಗ ಮಹಿಳೆ ಮತ್ತು ಯುವಕರಿಗೆ ಉದ್ಯೋಗ ಒದಗಿಸಿಕೊಡುವ ‘ಮೇಡ್‌ ಇನ್‌ ಚೈನಾ‘ ಬರುವ ಸ್ಥಳದಲ್ಲಿ ‘ಮೇಡ್‌ ಇನ್‌ ಭಾರತ’ ಹೆಸರು ಬರಲು ಪಡುವ ಪ್ರಯತ್ನವೇ ಈ ಸಿನಿಮಾ.

*

   

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !