ವೃಕ್ಷ ಮಿತ್ರನ ಸೂರ್ಯಕಿರಣ

7

ವೃಕ್ಷ ಮಿತ್ರನ ಸೂರ್ಯಕಿರಣ

Published:
Updated:

ಎಸ್.ಎಫ್. ಕಂಬೈನ್ಸ್‌ ಲಾಂಛನದಲ್ಲಿ ಫಾತಿಮಾ ನಿರ್ಮಿಸಿರುವ ಚಿತ್ರ ‘ಸೂರ್ಯ ಇವ ವೃಕ್ಷ ಮಿತ್ರ’ ಇದೇ 22ರಂದು ತೆರೆಗೆ ಬರುತ್ತಿದೆ. ಅಣ್ಣಯ್ಯ ಪಿ. ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

‘ನಮ್ಮ ದೇಶದಲ್ಲಿ ಸುಮಾರು ಐನೂರು ವಿವಿಧ ಜಾತಿಯ ಜೈವಿಕ ಇಂಧನ ತೆಗೆಯುವ ಮರಗಳಿವೆ. ನಮ್ಮ ಕರ್ನಾಟಕದಲ್ಲಿಯೇ ಸುಮಾರು 150ರಿಂದ 200 ಜಾತಿಯ ಮರಗಳಿವೆ. ಈ ಮರಗಳನ್ನು ದೇಶದಲ್ಲೆಲ್ಲಾ ಹೆಚ್ಚಾಗಿ ಬೆಳೆಸಿದರೆ ನೆರಳೂ ಇರುತ್ತದೆ. ಹಾಗೆಯೇ ಆಮ್ಲಜನಕವೂ ಹೆಚ್ಚುತ್ತದೆ. ಮಳೆ– ಬೆಳೆ ಉತ್ತಮವಾಗಿ ಆಗುತ್ತದೆ. ಇದೇ ಅಂಶಗಳನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಅಣ್ಣಯ್ಯ.

ಈ ಕಥೆಗೆ ಮುಖ್ಯ ಪ್ರೇರಣೆ ಪರಿಸರವಾದಿ ಆ.ನ. ಯಲ್ಲಪ್ಪ ರೆಡ್ಡಿ ಅವರ ‘ಲೈಫ್ ಬಿಯಾಂಡ್ ಸೈನ್ಸ್’ ಎಂಬ ಕೃತಿ.  ಬೆಂಗಳೂರು, ಶಿವಮೊಗ್ಗ ಹಾಗೂ ಹಾಸನದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ.

ಶಿವಸತ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಗೌರಿಶಂಕರ್ ಅವರ ಛಾಯಾಗ್ರಹಣವಿದೆ.

ಅರುಣ್ ಪಿ. ಥಾಮಸ್ ಸಂಕಲನ, ಛಾಲೆಂಜಿಂಗ್ ಸೂರಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಸಂಭಾಷಣೆಯನ್ನು, ನಾಗೇಶ್ ಹೆಗಡೆ, ಅಣ್ಣಯ್ಯ ಪಿ., ಜೆ.ಎಂ.ಪ್ರಹ್ಲಾದ್ ಹಾಗೂ ಎ.ಆರ್.ಸಲೀಂ ಬರೆದಿದ್ದಾರೆ. 

ಸಲ್ಮಾನ್, ರಾಧಾ, ಗಿರೀಶ್, ಚಂದ್ರಕಲಾ ಮೋಹನ್, ಯತಿರಾಜ್, ರಮೇಶ್ ಪಂಡಿತ್, ಬಿ.ರಾಮಮೂರ್ತಿ, ಗಿರಿಜಾ ಲೋಕೇಶ್‌ ತಾರಾಬಳಗದಲ್ಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !