ಬುಧವಾರ, ಆಗಸ್ಟ್ 21, 2019
22 °C

ಶೀರ್‌ಖುರ್ಮಾದಲ್ಲಿ ಶಬಾನಾ ಜೊತೆ ಸ್ವರಾ

Published:
Updated:
Prajavani

ಫರಾಜ್‌ ಆರಿಫ್‌ ಅನ್ಸಾರಿ ನಿರ್ದೇಶನದ ಶೀರ್‌ ಖುರ್ಮಾ ಸಿನಿಮಾದಲ್ಲಿ ನಟಿ ಸ್ವರಾ ಭಾಸ್ಕರ್‌ ಹಿರಿಯ ನಟಿ ಶಬಾನಾ ಅಜ್ಮಿ ಜೊತೆ ನಟಿಸುತ್ತಿದ್ದಾರೆ. ಇವರಿಬ್ಬರು ಇದೇ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದು, ಚಿತ್ರೀಕರಣದ ಸಂದರ್ಭದಲ್ಲಿ ತಮ್ಮಿಬ್ಬರ ಬಾಂಧವ್ಯದ ಬಗ್ಗೆ ಸ್ವರಾ ಮಾತನಾಡಿದ್ದಾರೆ. 

‘ಶಬಾನಾ ಅವರ ಸಾಧನೆಯಲ್ಲಿ ಶೇಕಡ 25ರಷ್ಟು ನಾನು ಸಾಧನೆ ಮಾಡಿದರೂ ಅದು ನನ್ನ ದೊಡ್ಡ ಅದೃಷ್ಟ. ಹಿರಿಯ ನಟಿಯಾದರೂ ಕಿರಿಯರನ್ನು ಗೌರವ ಅಭಿಮಾನದಿಂದ ಕಾಣುತ್ತಾರೆ. ಸಿನಿಮಾ ಆಯ್ಕೆಯಲ್ಲಿ ಅವರು ನನಗೆ ಪ್ರೇರಣೆ’ ಎಂದು ಹೇಳಿದ್ದಾರೆ.

2018ರಲ್ಲಿ ‘ವೀರೆ ದಿ ವೆಡ್ಡಿಂಗ್‌’ ಸಿನಿಮಾದಲ್ಲಿ ನಟಿಸಿದ್ದ ಸ್ವರಾ, ಈ ಸಿನಿಮಾದಲ್ಲಿ ದಿವ್ಯಾ ದತ್ತಾ ಅವರ ಜೊತೆ ಲೆಸ್ಬಿಯನ್‌ (ಸಲಿಂಗಕಾಮಿ) ಜೋಡಿಯಾಗಿ ಪಾತ್ರ ಮಾಡುತ್ತಿದ್ದಾರೆ. ಶಬಾನಾ ಅಜ್ಮಿ ತಾಯಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಆದರೆ ಸ್ವರಾ ಭಾಸ್ಕರ್‌ ಅಥವಾ ದಿವ್ಯಾ ದತ್ತಾ ಅವರಲ್ಲಿ ಯಾರ ಅಮ್ಮನಾಗಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಹೇಳಿಕೊಂಡಿಲ್ಲ. 

 ಇದರಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸುರೇಖಾ ಸಿಕ್ರಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  

ಸಲಿಂಗಕಾಮಿಗಳ ಪ್ರೀತಿಯ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಿದೆ. ಶೀಘ್ರದಲ್ಲೇ ತೆರೆ ಕಾಣುವ ನಿರೀಕ್ಷೆಯಿದೆ. 

ಫರಾಜ್‌ ಆರಿಫ್‌ ಅನ್ಸಾರಿ ಅವರು ಈ ಹಿಂದೆ ಮೊದಲ ಎಲ್‌ಜಿಬಿಟಿಕ್ಯು ಪ್ರೇಮಕಥೆ ‘ಸಿಸಾಕ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

 

Post Comments (+)