ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈರಾ’ ಚಿತ್ರದ ಕನ್ನಡ ಟೀಸರ್‌ ಬಿಡುಗಡೆ: ಶುಭ ಕೋರಿದ ಕಿಚ್ಚ ಸುದೀಪ್

Last Updated 20 ಆಗಸ್ಟ್ 2019, 11:49 IST
ಅಕ್ಷರ ಗಾತ್ರ

‘ಸೈರಾ ನರಸಿಂಹರೆಡ್ಡಿ’ –‘ಮೆಗಾ ಸ್ಟಾರ್’ ಚಿರಂಜೀವಿ ನಟನೆಯ 151ನೇ ಚಿತ್ರ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ನರಸಿಂಹರೆಡ್ಡಿ ಅವರ ಜೀವನಾಧಾರಿತ ಕಥನ. ಇಂದು ಬಿಡುಗಡೆಯಾದ ಟೀಸರ್‌ ವೀಕ್ಷಿಸಿದ ಪ್ರೇಕ್ಷಕರು ರೋಮಾಂಚನಗೊಂಡಿದ್ದಾರೆ.‌ ಚಿರಂಜೀವಿ ಅವರದು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿಯುವ ನರಸಿಂಹರೆಡ್ಡಿಯ ಪಾತ್ರ. ಟೀಸರ್‌ನಲ್ಲಿ ಅವರ ಹೋರಾಟ ಮೈನವಿರೇಳಿಸುತ್ತದೆ.

ಕನ್ನಡದಲ್ಲಿಯೂ ‘ಸೈರಾ ನರಸಿಂಹರೆಡ್ಡಿ’ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ಕನ್ನಡಕ್ಕೂ ಈ ಸಿನಿಮಾ ಡಬ್ಬಿಂಗ್‌ ಆಗುತ್ತಿರುವುದು ವಿಶೇಷ. ಅಮಿತಾಭ್ ಬಚ್ಚನ್, ಸುದೀಪ್, ನಯನತಾರಾ, ತಮನ್ನಾ ಭಾಟಿಯಾ, ಸೇತುಪತಿ ಮುಖ್ಯಭೂಮಿಕೆಯಲ್ಲಿದ್ದಾರೆ. ಇದಕ್ಕೆ ಆ್ಯಕ್ಷನ್ ಕಟ್‌ ಹೇಳಿರುವುದು ಸುರೇಂದರ್ ರೆಡ್ಡಿ.

ಚಿರಂಜೀವಿ ಅವರ ಪುತ್ರ ರಾಮ್‌ಚರಣ್‌ ಚಿತ್ರಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಅಕ್ಟೋಬರ್‌ 2ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ.

ನಟ ಸುದೀಪ್‌ ಸೈರಾ ಟೀಸರ್‌ಗೆ ಟ್ವಿಟರ್‌ನಲ್ಲಿ ಶುಭ ಕೋರಿದ್ದಾರೆ. ‘ರಾಮ್‌ಚರಣ್‌ ಮತ್ತು ಸುರೇಂದ್ರ ಅವರ ತಂಡದ ಶ್ರಮ ಶ್ಲಾಘನೀಯವಾದುದು. ಚಿರಂಜೀವಿ ಸರ್ ಅವರ ಲುಕ್‌ ಸೊಗಸಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT