ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜನಿ ಚಿತ್ರ, ಧನುಷ್‌ ರಿಮೇಕ್‌

Last Updated 30 ಜನವರಿ 2020, 14:19 IST
ಅಕ್ಷರ ಗಾತ್ರ

1981ರಲ್ಲಿ ಬಿಡುಗಡೆಯಾಗಿದ್ದದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಯನದ ತಮಿಳಿನ ಸೂಪರ್‌ ಹಿಟ್‌ ‘ನೆಟ್ರಿಕ್ಕನ್‌’ ಚಿತ್ರವನ್ನು ಅವರ ಅಳಿಯ ಧನುಷ್‌ ರಿಮೇಕ್‌ ಮಾಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಿಂದ ಹೊರಬಿದ್ದಿದೆ.

ರಜನಿ ನಿರ್ವಹಿಸಿದ ಪಾತ್ರಗಳನ್ನು ಧನುಷ್‌ ನಿರ್ವಹಿಸುತ್ತಿದ್ದು, ತಂದೆ ಮತ್ತು ಮಗನಾಗಿ ದ್ವಿಪಾತ್ರಗಳಲ್ಲಿ ಮಿಂಚಲಿದ್ದಾರೆ.‘ನೆಟ್ರಿಕ್ಕನ್‌’ ರಿಮೇಕ್‌ ಚಿತ್ರದ ತಂಡಕ್ಕೆ ಕೀರ್ತಿ ಸುರೇಶ್‌ ಕೂಡ ಸೇರಿಕೊಳ್ಳಲಿದ್ದಾರೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.

ರಜಿನಿ ಅಭಿಯನದ ‘ದರ್ಬಾರ್‌’ ಜತೆಯಲ್ಲಿಯೇ ಬಿಡುಗಡೆಯಾದ ಧನುಷ್‌ ನಟನೆಯ ‘ಪಟ್ಟಾಸ್‌’ ಚಿತ್ರ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಗೆಲುವು ತಂದುಕೊಟ್ಟಿದೆ. ಪಟ್ಟಾಸ್‌ ನಂತರ ಧನುಷ್‌ ‘ನೆಟ್ರಿಕನ್‌’ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ನೆಟ್ರಿಕನ್‌’ ಮೂಲ ಚಿತ್ರದಲ್ಲಿ ರಜನಿಕಾಂತ್‌ ಜೊತೆ ನಾಯಕಿಯಾಗಿ ಕೀರ್ತಿ ಸುರೇಶ್‌ ಅವರ ತಾಯಿ ಮೇನಕಾ ನಟಿಸಿದ್ದರು. ಚಿತ್ರಕ್ಕೆ ವಿಸುಸಂಭಾಷಣೆ ಇತ್ತು. ಹಿರಿಯ ಚಿತ್ರನಿರ್ದೇಶಕ ಕೆ. ಬಾಲಚಂದರ್‌, ಎಸ್‌. ಪಿ ಮುತ್ತುರಾಮನ್‌ ಈ ಚಿತ್ರವನ್ನು ನಿರ್ದೇಶಿಸಿದ್ದರು.

ಈಗ ಆಸಕ್ತಿಕರ ವಿಚಾರವೆಂದರೆ ಈ ರಿಮೇಕ್‌ ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್‌ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ‘ನೆಟ್ರಿಕ್ಕನ್‌’ ರಿಮೇಕ್‌ ಚಿತ್ರ ಸೆಟ್ಟೇರಲಿದೆ ಎಂಬ ಸುದ್ದಿ ವೈರಲ್‌ ಆಗಿದ್ದಾಗಿನಿಂದ ಈ ಚಿತ್ರದ ನಾಯಕಿ ಸ್ಥಾನಕ್ಕೆ ಕೀರ್ತಿ ಸುರೇಶ್‌ ಅವರನ್ನೇ ಆಯ್ಕೆ ಮಾಡುವಂತೆ ಅಭಿಮಾನಿಗಳೂ ಒತ್ತಾಯ ಮಾಡುತ್ತಿದ್ದರಂತೆ.

ಕೀರ್ತಿ ಸುರೇಶ್‌ ಹಾಗೂ ಧನುಷ್‌ ಈ ಹಿಂದೆ ‘ತೊಡರಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಚಿತ್ರದಲ್ಲಿ ಅವರ ಕೆಮಿಸ್ಟ್ರಿ ಚೆನ್ನಾಗಿ ಕೆಲಸ ಮಾಡಿತ್ತು. ಆದರೆ ಈ ಹೊಸ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ನಟಿಸಲಿದ್ದಾರೆಯೇ ಎಂಬ ಬಗ್ಗೆ ಅಧಿಕೃತ ಸುದ್ದಿ ಹೊರಬಿದ್ದಿಲ್ಲ.

ಇದೇ ವೇಳೆ ರಜನಿಕಾಂತ್‌ ಅಭಿನಯದ ಮತ್ತೊಂದು ಸೂಪರ್ ಹಿಟ್‌ ಸಿನಿಮಾ ‘ಮಾಪಿಳ್ಳೈ’ ಚಿತ್ರವನ್ನೂ ರಿಮೇಕ್‌ ಮಾಡಲು ಧನುಷ್‌ ಆಲೋಚನೆ ಮಾಡುತ್ತಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT