ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಭಾಷಾ ನಟ, ನಿರ್ದೇಶಕ ಪ್ರತಾಪ್ ಪೋಥನ್ ಹೃದಯಾಘಾತದಿಂದ ನಿಧನ

Last Updated 15 ಜುಲೈ 2022, 6:52 IST
ಅಕ್ಷರ ಗಾತ್ರ

ಚೆನ್ನೈ: ಬಹುಭಾಷಾ ನಟ ಪ್ರತಾಪ್ ಪೋಥೆನ್ ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಪ್ರತಾಪ್ ಪೋಥೆನ್‌ ಅವರಿಗೆ 70 ವರ್ಷ ವಯಸ್ಸಾಗಿತ್ತು. ಪೋಥೆನ್ ಅವರು ಪತ್ನಿ ಅಮಲಾ ಮತ್ತು ಮಗಳನ್ನು ಅಗಲಿದ್ದಾರೆ.

ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಅನೇಕ ದಿಗ್ಗಜರೊಂದಿಗೆ ಅಭಿನಯಿಸಿದ್ದ ಪೋಥೆನ್, ಹಲವು ಹಿಟ್‌ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ತಮಿಳಿನ 'ಮೀಂದುಮ್ ಒರು ಕಥಲ್ ಕಥೈ', 'ಮೂಡುಪನಿ' ಮತ್ತು 'ಪನ್ನೀರ್ ಪುಷ್ಪಂಗಳ್' ಚಿತ್ರಗಳು ಪೋಥೆನ್‌ಗೆ ಹೆಸರು ತಂದುಕೊಟ್ಟಿವೆ.

ತಮಿಳು ನಟಿ ರಾಧಿಕಾರನ್ನು ಪ್ರತಾಪ್ ವಿವಾಹವಾಗಿ ಒಂದು ವರ್ಷಕ್ಕೆ ವಿಚ್ಛೇದನ ನೀಡಿದ್ದರು. ಬಳಿಕ ಅಮಲಾ ಅವರೊಂದಿಗೆ ಎರಡನೇ ಮದುವೆಯಾಗಿದ್ದರು.

ಪೋಥೆನ್‌ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT