ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾರಪ್ಪ’ ಭಯಾನಕ ಪೋಸ್ಟರ್

ಧನುಷ್‌ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್‌
Last Updated 26 ಜನವರಿ 2020, 19:30 IST
ಅಕ್ಷರ ಗಾತ್ರ

ತಮಿಳು ಬಾಕ್ಸ್‌ ಆಫೀಸ್ ಕೊಳ್ಳೆಹೊಡೆದ ಧನುಷ್‌ ಮತ್ತು ಮಂಜು ವಾರಿಯರ್‌ ಜೋಡಿಯಾಗಿ ನಟಿಸಿದ 'ಅಸುರನ್' ಸಿನಿಮಾ ತೆಲುಗಿಗೆ ರಿಮೇಕ್‌ ಆಗುತ್ತಿದೆ. ತಮಿಳಿನ ‘ಅಸುರನ್‌’ ತೆಲುಗಿನಲ್ಲಿ ‘ನಾರಪ್ಪ’ನಾಗಲಿದ್ದಾನೆ. ವಿಕ್ಟರಿ ವೆಂಕಟೇಶ್‌ ‘ನಾರಪ್ಪ’ನಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದ್ದು, ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

‘ನಾರಪ್ಪ’ ಸಿನಿಮಾ ಪೋಸ್ಟರ್‌ಗಳು ಭಯಂಕರವಾಗಿದ್ದು, ವೆಂಕಟೇಶ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಯಲ್ಲಿವಿಭೂತಿ ಮಧ್ಯೆ ಕಪ್ಪು ತಿಲಕ, ತಲೆಗೆ ಹಸಿರು ಟಾವೆಲ್‌ ಸುತ್ತಿದ ಗಡ್ಡಧಾರಿ ವೆಂಕಟೇಶ್‌ ಮುಖವೆಲ್ಲಾ ರಕ್ತದಿಂದ ಒದ್ದೆಯಾಗಿದೆ. ರೋಷದಿಂದ ದುರುಗಟ್ಟುತ್ತಿರುವ ಕಣ್ಣುಗಳುಕೆಂಡಕಾರುತ್ತಿದ್ದರೆ, ಕೈಯಲ್ಲಿರುವ ಮಚ್ಚಿನಿಂದ ತೊಟ್ಟಿಕ್ಕುತ್ತಿರುವ ಹಸಿ, ಹಸಿ ರಕ್ತ ಭೀಕರತೆಗೆ ಸಾಕ್ಷಿಯಾಗಿದೆ.

ಸಿನಿಮಾವನ್ನು ಶ್ರೀಕಾಂತ್ ಅಡ್ಡಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವೆಂಕಟೇಶ್ ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಸದ್ಯದಲ್ಲಿಯೇ ಶೂಟಿಂಗ್‌ ಆರಂಭವಾಗಲಿದೆ.

ವೆಟ್ರಿಮಾರನ್‌ ನಿರ್ದೇಶನದ ಅಸುರನ್‌ ಬಿಡುಗಡೆಯಾಗಿ ನಾಲ್ಕು ತಿಂಗಳು ಕಳೆದರೂ ಇನ್ನೂ ಪ್ರಭಾವ ಕಡಿಮೆಯಾಗಿಲ್ಲ. ತಮಿಳುನಾಡಿನಲ್ಲಿ ಇನ್ನೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ.ನಯವಂತಿಕೆ, ಸೂಕ್ಷ್ಮತೆಯ ಎಳೆಗಳಿಲ್ಲದೆ ಹಸಿಹಸಿಯಾಗಿ ನಿರ್ಮಾಣಗೊಂಡ ಸಿನಿಮಾವಿದು. ತನ್ನ ಹಸಿತನದ ಕಥಾಹಂದರದಿಂದಲೇ ಭಿನ್ನವಾಗಿ ಕಾಣಿಸಿಕೊಂಡಿತ್ತು.

‘ಅಸುರನ್’ ಸಿನಿಮಾ ಪೂಮಣಿ ಅವರ‘ವೆಕ್ಕೈ’ ಕಾದಂಬರಿ ಆಧಾರಿತವಾದದ್ದು. 1980ರ ದಶಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಜಾತಿ ಪದ್ಧತಿ ಹಾಗೂ ರಾಜಕೀಯವನ್ನು ಪ್ರಧಾನವಾಗಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT