ಶುಕ್ರವಾರ, ಸೆಪ್ಟೆಂಬರ್ 20, 2019
28 °C

ತಾನ್ಯಾ ಹೋಪ್‌ ಬಿಕಿನಿ ಫೋಟೊ ವೈರಲ್

Published:
Updated:

ಕನ್ನಡದಲ್ಲಿ ನಟಿ ತಾನ್ಯಾ ಹೋಪ್‌ ನಟಿಸಿದ ಮೊದಲ ಚಿತ್ರ ‘ಯಜಮಾನ’. ಈ ಚಿತ್ರದ ‘ಬಸಣ್ಣಿ ಬಾ...’ ಯೂಟ್ಯೂಬ್‌ನಲ್ಲಿ ಹೊಸ ಟ್ರೆಂಡ್‌ ಸೃಷ್ಟಿಸಿತ್ತು. ಜೊತೆಗೆ, ಪಡ್ಡೆಹುಡುಗರ ನಿದ್ದೆ ಕೆಡಿಸಿದ್ದು ಸುಳ್ಳಲ್ಲ.

ಅಂದಹಾಗೆ ಹೊಸ ಸುದ್ದಿ ಅದಲ್ಲ. ತಾನ್ಯಾ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿವೆ. ಈಜು ಕೊಳವೊಂದರಲ್ಲಿ ತಾನ್ಯಾ ಹ್ಯಾಪಿ ಮೂಡ್‌ನಲ್ಲಿ ಹಸಿರು ಬಣ್ಣದ ಬಿಕಿನಿ ತೊಟ್ಟು ಪೋಸ್‌ ಕೊಟ್ಟಿದ್ದಾರೆ. ಈ ಹಾಟ್‌ಲುಕ್‌ ನೆಟ್ಟಿಗರ ಬೆರಗಾಗಿದ್ದಾರೆ.

ತಾನ್ಯಾ ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ಅವರು ಶಿಕ್ಷಣ ಪಡೆದಿದ್ದು ಇಲ್ಲಿನ ಸೇಕ್ರೆಡ್‌ ಹಾರ್ಟ್‌ ಬಾಲಕಿಯರ ಸ್ಕೂಲ್‌ನಲ್ಲಿ. ಇಂಗ್ಲೆಂಡ್‌ನ ವೆಸ್ಟ್‌ ಮಿನಿಸ್ಟರ್‌ ವಿಶ್ವವಿದ್ಯಾಲಯದಲ್ಲಿ ಪದವಿ ಅವರು ಪೂರೈಸಿದ್ದಾರೆ.

ಮೊದಲಿಗೆ ವೃತ್ತಿಬದುಕು ಆರಂಭಿಸಿದ್ದು ಮಾಡೆಲಿಂಗ್‌ ಕ್ಷೇತ್ರದಲ್ಲಿ. ಬಳಿಕ ತೆಲುಗಿನ ‘ನೇನು ಶೈಲಜಾ’ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ನಂತರ ಜಗಪತಿಬಾಬು ಮುಖ್ಯಭೂಮಿಕೆಯ ‘ಪಟೇಲ್ ಎಸ್‌.ಐ.ಆರ್’ ಚಿತ್ರದಲ್ಲಿ ನಟಿಸಿದರು. 

ಕನ್ನಡದಲ್ಲಿ ನಟ ಉಪೇಂದ್ರ ನಟನೆಯ ‘ಹೋಮ್‌ ಮಿನಿಸ್ಟರ್‌’ ಚಿತ್ರದಲ್ಲೂ ತಾನ್ಯಾ ನಟಿಸಿದ್ದಾರೆ. ಜೊತೆಗೆ, ನಟ ಚಿರಂಜೀವಿ ಸರ್ಜಾ ನಟನೆಯ ‘ಖಾಕಿ’ ಚಿತ್ರಕ್ಕೂ ಅವರೇ ನಾಯಕಿ. ಅವರು ನಾಯಕಿಯಾಗಿರುವ ಬಹುನಿರೀಕ್ಷಿತ ನಟ ಅಭಿಷೇಕ್ ನಟನೆಯ ‘ಅಮರ್’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ.

Post Comments (+)