‘ತಖ್ತ್‌’ನಲ್ಲಿ ಬಿ ಟೌನ್‌ ಅಗ್ರಜರು

7
ಬಾಲಿವುಡ್‌

‘ತಖ್ತ್‌’ನಲ್ಲಿ ಬಿ ಟೌನ್‌ ಅಗ್ರಜರು

Published:
Updated:
Deccan Herald

ತಮ್ಮ ಹೊಸ ಸಿನಿಮಾಕ್ಕೆ ಅಂದುಕೊಂಡ ಎಲ್ಲಾ ನಟ ನಟಿಯರನ್ನು ಕಲೆಹಾಕುವಲ್ಲಿ ಕರಣ್‌ ಜೋಹರ್‌ ಯಾನೆ ಕೇಜೊ ಯಶಸ್ವಿಯಾಗಿದ್ದಾರೆ. ಹಾಗಾಗಿ ‘ತಖ್ತ್‌’ ಸಿನಿಮಾ ಸೆಟ್ಟೇರುವುದಕ್ಕೂ ಮೊದಲೇ ಸುದ್ದಿಯಾಗುತ್ತಿದೆ. ಜೊತೆಗೆ, ಭಾರಿ ನಿರೀಕ್ಷೆಯನ್ನೂ ಹುಟ್ಟುಹಾಕುತ್ತಿದೆ.

‘ಯೇ ದಿಲ್‌ ಹೈ ಮುಷ್ಕಿಲ್‌’ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳೇ ಕಳೆದಿದ್ದರೂ ಕರಣ್‌ ಹೊಸ ಸಿನಿಮಾದ ಬಗ್ಗೆ ಬಾಯಿಬಿಡುತ್ತಿರಲಿಲ್ಲ. ರಣವೀರ್‌ ಸಿಂಗ್‌ ತಮ್ಮ ಸಿನಿಮಾದ ನಾಯಕನಾಗಬೇಕು ಎಂದು ತೀರ್ಮಾನಿಸಿದ್ದ ಕರಣ್‌ಗೆ ರಣವೀರ್‌ ಕೈಗೇ ಸಿಗುತ್ತಿರಲಿಲ್ಲ. ಇದೀಗ, ಅವರ ಲೆಕ್ಕಾಚಾರ ಗೆದ್ದಿದೆ.

‘ತುಂಬಾ ಖುಷಿ ಮತ್ತು ಹೆಮ್ಮೆಯಿಂದ ಈ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇನೆ. ‘ತಖ್ತ್‌’ನಲ್ಲಿ ರಣವೀರ್‌ ಸಿಂಗ್‌, ಆಲಿಯಾ ಭಟ್‌, ಕರೀನಾ ಕಪೂರ್‌, ವಿಕ್ಕಿ ಕೌಶಲ್‌, ಭೂಮಿ ಪೆಡ್ನೇಕರ್‌, ಅನಿಲ್‌ ಕಪೂರ್‌ ಹಾಗೂ ಜಾಹ್ನವಿ ಕಪೂರ್‌ ನಟಿಸುವುದು ಖಚಿತವಾಗಿದೆ’ ಎಂದು ಗುರುವಾರ ಬೆಳಿಗ್ಗೆಯೇ ಕರಣ್‌ ಟ್ವೀಟ್‌ ಮಾಡಿದ್ದಾರೆ.

ಧರ್ಮ ಪ್ರೊಡಕ್ಷನ್ಸ್‌ ನಿರ್ಮಿಸಲಿರುವ ‘ತಖ್ತ್‌’ನ ಚಿತ್ರಕಥೆ ಸುಮಿತ್‌ ರಾಯ್‌, ಸಂಭಾಷಣೆ ಹುಸೇನ್‌ ಹೈದಿರಿ ಅವರದ್ದು. ಮೊಘಲ್‌ ಸಾಮ್ರಾಜ್ಯದಲ್ಲಿ ಸಹೋದರರಿಬ್ಬರ ನಡುವೆ ನಡೆದ ಯುದ್ಧದ ಕಥೆಯನ್ನು ಒಳಗೊಂಡಿದೆ. ರಣವೀರ್‌ ಸಿಂಗ್‌  ದಾರಾ ಶುಕೋಹ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಪ್ರೇಮಿಯ ಪಾತ್ರ ಆಲಿಯಾ ಭಟ್‌ ಅವರದು. ಕರೀನಾ ಕಪೂರ್‌ ಅವರದು ಮೊಘಲ್‌ ರಾಣಿ ಜಹಾಂರಾ ಪಾತ್ರ. ಶುಕೋಹ್‌ ಸಹೋದರನಾಗಿ ವಿಕ್ಕಿ ಕೌಶಲ್‌ ನಟಿಸಲಿದ್ದಾರೆ.

ಸಂಜಯ್‌ ಲೀಲಾ ಬನ್ಸಾಲಿ ಅವರು ಐತಿಹಾಸಿಕ ಕಥೆಗಳನ್ನು ವೈಭವೋಪೇತ ಸಿನಿಮಾಗಳಾಗಿ ಉಣಬಡಿಸಿದ ಬಳಿಕ ಇದೀಗ ಕರಣ್‌ ಜೋಹರ್‌ ಅಂತಹುದೇ ಪ್ರಯತ್ನಕ್ಕೆ ಇಳಿದಿರುವುದು ಸಹಜವಾಗಿಯೇ ಚಿತ್ರರಂಗದಲ್ಲಿ ಕುತೂಹಲ ಕೆರಳಿಸಿದೆ. 2020ರಲ್ಲಿ ಚಿತ್ರವನ್ನು ತೆರೆಗೆ ತರುವುದಾಗಿಯೂ ಕರಣ್‌ ಹೇಳಿಕೊಂಡಿದ್ದಾರೆ.


-ಆಲಿಯಾ ಭಟ್‌

***


-ಕರೀನಾ ಕಪೂರ್‌ ಖಾನ್‌

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !