ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 26ರಂದು ‘ಪಿರ್ಕಿಲು’ ತುಳು ಸಿನಿಮಾ ತೆರೆಗೆ

Last Updated 13 ಏಪ್ರಿಲ್ 2023, 11:05 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ಸಿನಿಮಾಸ್ ಲಾಂಛನದಲ್ಲಿ ತಯಾರಾದ ‘ಪಿರ್ಕಿಲು’ ತುಳು ಸಿನಿಮಾ ಮೇ 26ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಎಚ್.ಡಿ. ಆರ್ಯ ಹಾಗೂ ತುಳು ರಂಗಭೂಮಿ ನಟ ಭೋಜರಾಜ್ ವಾಮಂಜೂರು ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಿರ್ಕಿಲು ಸಿನಿಮಾಕ್ಕೆ ಮೂರು ಹಂತದಲ್ಲಿ ಸುಳ್ಯ, ಪುತ್ತೂರು, ಮಂಗಳೂರು, ಕುರಿಯ, ಉಪ್ಪಿನಂಗಡಿಯಲ್ಲಿ 29 ದಿನಗಳ ಕಾಲ ಚಿತ್ರೀಕರಣ ನಡೆದಿತ್ತು. ಸಿನಿಮಾಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ಇದು ಹಾಸ್ಯ ಮತ್ತು ಕೌಟುಂಬಿಕ ಮನರಂಜನೆಯ ಚಿತ್ರ. ಎಲ್ಲಾ ವರ್ಗದ ಜನರು ಇಷ್ಟ ಪಡುವ ಕತೆಯನ್ನು ಹೊಂದಿದೆ’ ಎಂದರು.

ಊರಿನ ಜನರಿಂದ ‘ಪಿರ್ಕಿಲು’ ಎಂದು ಕರೆಸಿಕೊಳ್ಳುವ ಹುಡುಗರು ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತಾರೆ. ಎಂಬುದನ್ನು ಹಾಸ್ಯಭರಿತವಾಗಿ ಸಂದೇಶ ಸಾರುವುದೇ ಚಿತ್ರದ ಒನ್ ಲೈನ್ ಸ್ಟೋರಿ ಆಗಿದೆ. ನಾಯಕ ನಟರಾಗಿ ವರ್ಧನ್ ಮತ್ತು ಸುದೇಶ್, ನಾಯಕಿಯಾಗಿ ಸಲೋಮಿ ಡಿಸೋಜ, ಲತಾ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಹೇಳಿದರು.

ಚಿತ್ರಕ್ಕೆ ಸತೀಶ್ ಪೆರ್ನೆ, ಶಿವಪ್ರಸಾದ್ ಇಜ್ಞಾವು ಬಂಡವಾಳ ಹಾಕಿದ್ದಾರೆ. ಎಚ್.ಡಿ. ಆರ್ಯ ಅವರು ನಿರ್ದೇಶಕದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಬಿತಾ ತುಳು ಸಂಭಾಷಣೆ ತರ್ಜುಮೆಯನ್ನು ಮಾಡಿದ್ದಾರೆ. ತಾರಾ ಬಳಗದಲ್ಲಿ ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್, ‘ನವರಸ ರಾಜೆ’ ಭೋಜರಾಜ ವಾಮಂಜೂರು, ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಸುಮಿತ್ರಾ ರೈ, ಅಮಿತಾ, ನವೀನ್ ಬೋಂದೇಲ್, ಅರ್ಪಣ್, ಅನಿಲ್ ರೈ, ರಂಜಿತ್ ರೈ, ತಿಮ್ಮಪ್ಪ ಕುಲಾಲ್, ಪ್ರಭಾಕರ ಶೆಟ್ಟಿ, ಮೊಹನ್, ಸೋನಿ ಕಾಣಿಸಿಕೊಂಡಿದ್ದಾರೆ.

ಸಂಗೀತದಲ್ಲಿ ವಿ. ಮನೋಹರ, ಸಾಹಿತ್ಯದಲ್ಲಿ ಶ್ರೀಧರ್ ಕರ್ಕೇರ, ವಿ. ಮನೋಹರ್, ವಸ್ತ್ರಾಲಂಕಾರದಲ್ಲಿ ‌ಲತಾ, ನಿರ್ದೇಶನದಲ್ಲಿ ದೀಪು, ಆರಾಧ್ಯ, ಛಾಯಾಗ್ರಹಣದಲ್ಲಿ ಎ. ಆರ್ ಕೃಷ್ಣ, ಕೀರ್ತಿ, ಮೇಕಪ್‌ನಲ್ಲಿ ದಿಶಾ, ದಿಲೀಪ್, ಸಂಕಲನದಲ್ಲಿ ಎ.ಆರ್ ಕೃಷ್ಣ, ಅಭಿಷೇಕ್ ರಾವ್ ಸಹಕರಿಸಿದ್ದಾರೆ.

ನಿರ್ಮಾಪಕರಾದ ಶಿವಪ್ರಸಾದ್ ಇಜ್ಜಾವು, ಸತೀಶ್ ಪೆರ್ನೆ, ಧನು ರೈ, ಲತಾ ಎಸ್. ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT