ಉಲ್ಟಾ ಆರತಿ ಮಾಡಿದ ಕತ್ರಿನಾ!

7

ಉಲ್ಟಾ ಆರತಿ ಮಾಡಿದ ಕತ್ರಿನಾ!

Published:
Updated:
Deccan Herald

ನೀವು ದೇವರಿಗೆ ಹೇಗೆ ಆರತಿ ಮಾಡುತ್ತೀರಿ? ಪ್ರದಕ್ಷಿಣಾಕಾರವಾಗಿ ಮಾಡುತ್ತೀರಿ ತಾನೆ? ಇದ್ಯಾಕೆ ಈ ಪ್ರಶ್ನೆ ಎಂದು ಬೆರಗಾದಿರಾ? ಗಣೇಶ ಚತುರ್ಥಿ ದಿನ ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಉಲ್ಟಾ, ಅಂದರೆ ಬಲದಿಂದ ಎಡಕ್ಕೆ ಆರತಿ ಮಾಡಿ ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಪ್ರತಿವರ್ಷ ಗಣೇಶ ಚತುರ್ಥಿ ದಿನ ಮುಂಬೈನ ತಮ್ಮ ಮನೆಯಲ್ಲಿ ಗಡದ್ದಾಗಿ ಪೂಜೆ ಮಾಡಿ ಆತ್ಮೀಯರನ್ನು ಆಹ್ವಾನಿಸುತ್ತಾರೆ. ಮಧ್ಯಾಹ್ನದ ವೇಳೆ ಅತಿಥಿಗಳು ಮತ್ತು ಮನೆ ಮಂದಿಯೆಲ್ಲಾ ಒಬ್ಬೊಬ್ಬರಾಗಿ ಆರತಿ ಮಾಡುತ್ತಾರೆ. ಸಲ್ಲೂ ಮನೆಯ ಯಾವುದೇ ವಿಶೇಷ ಸಮಾರಂಭಗಳಿಗೆ ಖಾಯಂ ಆಹ್ವಾನಿತರಾಗುವ ಗೆಳತಿ ಕತ್ರಿನಾ ಕೈಫ್‌ ಕೂಡಾ ಗುರುವಾರ ಆರತಿ ಮಾಡಲು ಸರತಿಯಲ್ಲಿ ನಿಂತಿದ್ದರು. 

ಸಹೋದರರಾದ ಸಲ್ಮಾನ್– ಸೊಹೈಲ್‌ ಮತ್ತು ಅರ್ಬಾಜ್‌ ಖಾನ್‌ ಆರತಿ ಮಾಡಿದ ಬಳಿಕ ಅವರ ತಾಯಿ ಸಭಾ, ಸಹೋದರಿಯರಾದ ಅಲ್ವೀರಾ ಮತ್ತು ಅರ್ಪಿತಾ, ಆಯುಷ್‌ ಶರ್ಮ ಮತ್ತು ಪುಟ್ಟ ಅಳಿಯ ಆಹಿಲ್‌ ಅವರೂ ಗಣೇಶನಿಗೆ ಆರತಿ ಮಾಡಿದರು. ನಂತರದ ಸರದಿಯಲ್ಲಿದ್ದ ಕತ್ರಿನಾ ಆರತಿ ತಟ್ಟೆಯನ್ನು ಕೈಗೆತ್ತಿಕೊಂಡವರೇ ಬಲಭಾಗದಿಂದ ಎಡಭಾಗಕ್ಕೆ ಆರತಿ ಮಾಡಿದರು. ಪೂಜಾ ವಿಧಿಗಳು ಮತ್ತು ಆರತಿಯ ವಿಡಿಯೊ ಚಿತ್ರೀಕರಿಸಿದ್ದ ಸಲ್ಲೂ ಗೆಳೆಯ ಅತುಲ್‌ ಅಗ್ನಿಹೋತ್ರಿ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದಾಗಲೇ ಕತ್ರಿನಾ ತಪ್ಪೆಸಗಿದ್ದು ಬೆಳಕಿಗೆ ಬಂದದ್ದು.

‘ಆರತಿ ಹೇಗೆ ಬೆಳಗಬೇಕು ಎಂದು ಗೊತ್ತಿಲ್ಲದಿದ್ದರೆ ಮೊದಲೇ ತಿಳಿದುಕೊಂಡು ಹೋಗಬೇಕಿತ್ತು’, ‘ಅವಳ್ಯಾರು ಉಲ್ಟಾ ಆರತಿ ಮಾಡ್ತಿರೋಳು’, ‘ಇದೇನಪ್ಪಾ ಕತ್ರಿನಾ ಹೀಗೆ ಆರತಿ ಮಾಡ್ತಿದ್ದಾಳೆ’, ‘ಆರತಿ ಹೇಗೆ ಮಾಡಬೇಕು ಎಂದು ಗೊತ್ತಿಲ್ಲದವಳ ಕೈಗೆ ಆರತಿ ತಟ್ಟೆ ಕೊಟ್ಟು ಭಾರತೀಯ ಸಂಸ್ಕೃತಿಗೇ ಅಪಚಾರ ಎಸಗಲಾಗಿದೆ’... ಹೀಗೆ ನೂರಾರು ಬಗೆಯ ಆಕ್ಷೇಪ, ಟೀಕೆ, ಅನುಕಂಪದ ಮಾತುಗಳು ವ್ಯಕ್ತವಾಗಿವೆ.

ಬರಹ ಇಷ್ಟವಾಯಿತೆ?

 • 8

  Happy
 • 5

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !