ನಟ, ನಿರ್ದೇಶಕ ಉಪೇಂದ್ರ ಅವರ ಕುಟುಂಬದಿಂದ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಪುತ್ರ ನಿರಂಜನ ಸುಧೀಂದ್ರ ‘ಸೂಪರ್ ಸ್ಟಾರ್’ ಚಿತ್ರದಲ್ಲಿ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

18 ವರ್ಷಗಳ ಹಿಂದೆ ತೆರೆಕಂಡಿದ್ದ, ಉಪೇಂದ್ರ ಅಭಿನಯದ‘ಸೂಪರ್ ಸ್ಟಾರ್’ ಚಿತ್ರವನ್ನು ಕನ್ನಡ ಸಿನಿರಸಿಕರು ಇನ್ನೂ ಮರೆತಿರಲಾರರು. ಈ ಚಿತ್ರದಲ್ಲಿಉಪೇಂದ್ರ ಹಲವು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದರು. ಉಪೇಂದ್ರಗೆ ಜೋಡಿಯಾಗಿ ಬಾಲಿವುಡ್ ಚೆಲುವೆ ಕೀರ್ತಿ ರೆಡ್ಡಿ ನಟಿಸಿದ್ದರು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದವರು ನಾಗತೀಹಳ್ಳಿ ಚಂದ್ರಶೇಖರ್. ಸಂಗೀತ ನಿರ್ದೇಶನ ಹಂಸಲೇಖ ಅವರದು. ಅದ್ನಾನ್ ಸಮಿ ಮತ್ತು ಹೇಮಂತ್ ಕುಮಾರ್ ಹಾಡಿದಈ ಚಿತ್ರದಹಾಡುಗಳು ಸೂಪರ್ ಹಿಟ್ ಕೂಡ ಆಗಿದ್ದವು.ಈ ಚಿತ್ರ ಕನ್ನಡದಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ತೆಲುಗಿಗೆ ರಿಮೇಕ್ ಆಗಿ ಅಲ್ಲಿ ಭಾರಿ ಯಶಸ್ಸು ಕಂಡಿತ್ತು.

ಇದೇ ಶೀರ್ಷಿಕೆಯ ಚಿತ್ರದಲ್ಲಿ ಉಪ್ಪಿಯ ಅಣ್ಣನ ಮಗ ಸ್ಯಾಂಡಲ್ವುಡ್ನಲ್ಲಿ ‘ಸೂಪರ್ ಸ್ಟಾರ್’ ಆಗುವ ಕನಸಿನೊಂದಿಗೆ ಕಾಲಿಡುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ವೆಂಕಟೇಶ್ ಬಾಬು ನಿರ್ದೇಶನ ಮಾಡುತ್ತಿದ್ದಾರೆ. ಆರ್ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಬ್ಯಾನರ್ನಡಿ ಈ ಚಿತ್ರ ನಿರ್ಮಿಸಲಾಗುತ್ತಿದೆ. ಅಕ್ಟೋಬರ್ನಿಂದ ಚಿತ್ರದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆ ಇದೆ.

ನಿರಂಜನ್ಗೆ ಇದೇ 20ರಂದು ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಕಾಣಿಕೆಯಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಅಣಿಯಾಗಿದೆ. ನಿರಂಜನ್ಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಟಾರ್ನಟ‘ರಾಕಿ ಭಾಯ್’ ಯಶ್, ‘ಸೂಪರ್ ಸ್ಟಾರ್’ ಚಿತ್ರದ ಟೀಸರ್ಗೆ ಧ್ವನಿ ನೀಡಿದ್ದಾರೆ. ಇತ್ತೀಚೆಗಷ್ಟೇ ಸ್ಟುಡಿಯೊದಲ್ಲಿ ಬಾಬು ಯಶ್ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ನವ ನಟ ನಿರಂಜನ್ ಡೆಡಿಕೇಷನ್ಗೆ ಯಶ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ, ಏನೇ ನೆರವು ಬೇಕಾದರೂ ಮಾಡಲು ಸಿದ್ಧ ಎನ್ನುವ ಭರವಸೆ ನೀಡಿದ್ದಾರಂತೆ.

ನಿರಂಜನ್ ಈ ಚಿತ್ರದಲ್ಲಿ ಡಾನ್ಸರ್ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರಂತೆ. ಜತೆಗೆ ದೇಹವನ್ನು ದಂಡಿಸಿ, ಪಾತ್ರಕ್ಕೆ ತಕ್ಕಂತೆ ಹುರಿಗೊಳಿಸಿಕೊಂಡಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.