ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಊರ್ವಶಿ ರೌಟೆಲಾ ಮುಂಬೈನಲ್ಲಿ ₹190 ಕೋಟಿ ಬಂಗ್ಲೆ ಖರೀದಿಸಿದರೇ?

ಕನ್ನಡದ ದರ್ಶನ್ ಅಭಿನಯದ ಐರಾವತ್ ಸಿನಿಮಾದಲ್ಲಿ ಅಭಿನಯಿಸಿದ್ದ ಊರ್ವಶಿ
Published 2 ಜೂನ್ 2023, 5:14 IST
Last Updated 2 ಜೂನ್ 2023, 5:14 IST
ಅಕ್ಷರ ಗಾತ್ರ

ಮುಂಬೈ: ಗ್ಲಾಮರಸ್ ಪಾತ್ರ ಹಾಗೂ ಬೋಲ್ಡ್ ಅಭಿನಯದ ಮೂಲಕ ಹೆಸರು ಗಳಿಸಿರುವ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಬಗ್ಗೆ ಇತ್ತೀಚೆಗೆ ಕೆಲ ಟಿವಿ ವಾಹಿನಿ, ವೆಬ್‌ಸೈಟ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಿದಾಡಿತ್ತು.

ಊರ್ವಶಿ ಅವರು ಮುಂಬೈನ ಜುಹು ಪ್ರದೇಶದಲ್ಲಿ ₹190 ಕೋಟಿ ಬೆಲೆ ಬಾಳುವ ನಾಲ್ಕು ಮಹಡಿಯ ದೊಡ್ಡ ಬಂಗ್ಲೆ ಖರೀದಿಸಿದ್ದಾರೆ ಎಂದು ವದಂತಿ ಎದ್ದಿತ್ತು. ಈ ಮನೆ ನಿರ್ಮಾಪಕ ಯಶ್ ಚೋಪ್ರಾ ಅವರ ಮನೆಯ ಹಿಂದೆಯೇ ಇದೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿತ್ತು.

ಈ ಬಗ್ಗೆ ಕಿಡಿಕಾರಿ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಊರ್ವಶಿ ತಾಯಿ ಮೀರಾ ರೌಟೆಲಾ ಅವರು ಓ ದೇವಾ...! ಇದು ಸುಳ್ಳು ಸುದ್ದಿ, ಇಂತಹ ದಿನ ನಮಗೆ ಬೇಗ ಬರಲಿ ಎಂದು ಆಶಿಸುತ್ತೇನೆ.. ಇಂತ ಸುದ್ದಿ ಹಬ್ಬಿಸಿದ ಮಾಧ್ಯಮಗಳ ಪ್ರಾರ್ಥನೆ ಫಲಿಸಲಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಬಗ್ಗೆ ನಟಿ ಊರ್ವಶಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕನ್ನಡದ ದರ್ಶನ್ ಅಭಿನಯದ ಐರಾವತ್ ಸಿನಿಮಾದಲ್ಲಿ ಅಭಿನಯಿಸಿದ್ದ ಊರ್ವಶಿ ಸದ್ಯ ‘ದಿಲ್ ಹೇ ಗ್ರೇ’ ಎಂಬ ಹಿಂದಿ ಹಾಗೂ ‘ಬ್ಲ್ಯಾಕ್ ರೋಸ್’ ಎಂಬ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT