ಮುಂಬೈ: ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಪಾನ್‌ಇಂಡಿಯಾ ‘ಲೈಗರ್’ ಸಿನಿಮಾದ ’ಥೀಮ್‘ ಟೀಸರ್ ಬಿಡುಗಡೆಯಾಗಿದೆ.
ನಿನ್ನೆ (ಮೇ 9) ವಿಜಯ್ ದೇವರಕೊಂಡ ಅವರ ಜನ್ಮದಿನ ಹಿನ್ನೆಲೆಯಲ್ಲಿ ಚಿತ್ರತಂಡ ‘ಥೀಮ್ ಲಿರಿಕಲ್‘ ಮ್ಯೂಸಿಕ್ ಬಿಡುಗಡೆ ಮಾಡಿದೆ. ಲೈಗರ್ ಹಂಟ್ ಹೆಸರಿನಲ್ಲಿ ಈ ‘ಥೀಮ್‘ ಬಿಡುಗಡೆಯಾಗಿದೆ. ಕನ್ನಡದಲ್ಲೂ ಈ ಥೀಮ್ ಬಿಡುಗಡೆಯಾಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆ ಪಡೆದಿದೆ. ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಲುಕ್‌ಗೆ ಪ್ರೇಕ್ಷಕರುಮಾರುಹೋಗಿದ್ದಾರೆ.
ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಹಾಗೂ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಜೊತೆ ವಿಜಯ್ ನಟಿಸಿದ್ದಾರೆ. 'ಪೋಕಿರಿ' ಖ್ಯಾತಿಯ ಪುರಿ ಜಗನ್ನಾಥ್ ಚಿತ್ರವನ್ನು ನಿರ್ದೇಶಿಸಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.