ಮುಂಬೈ: ವಿಜಯ್ ವರ್ಮಾ ಮುಖ್ಯಪಾತ್ರದಲ್ಲಿರುವ IC814 ದಿ ಕಂದಹಾರ್ ಹೈಜಾಕ್ ಸಿನಿಮಾ (IC814 The Kandahar Hijack) ಇದೇ ಆಗಸ್ಟ್ 29 ರಂದು ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಾಣಲಿದೆ.
ಭಾರತದ ವಿಮಾನಯಾನ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ಅಪಹರಣ ಪ್ರಕರಣ ಎಂದು ಪರಿಗಣಿಸಲ್ಪಟ್ಟಿರುವ 1999ರ ಕಂದಹಾರ್ ಹೈಜಾಕ್ ಕುರಿತು ಈ ಸಿನಿಮಾ ಕಥೆ ಹೊಂದಿದೆ.
ನಿರ್ಮಾಪಕರು ಸಾಮಾಜಿಕ ಜಾಲತಾಣಗಳ ಮುಖಾಂತರ ಇಂದು ಈ ಚಿತ್ರದ ಅಧಿಕೃತ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
ಥಪ್ಪಡ್ ಖ್ಯಾತಿಯ ಅನುಭವ್ ಸಿನ್ಹಾ ಈ ಸಿನಿಮಾ ನಿರ್ದೇಶಿಸಿದ್ದಾರೆ. ವಿಜಯ್ ವರ್ಮಾ ಜೊತೆಯಾಗಿ ದಿಯಾ ಮಿರ್ಜಾ , ನಾಷಿರುದ್ದೀನ್ ಷಾ ಅವರು ಮುಖ್ಯಪಾತ್ರಗಳಲ್ಲಿದ್ದಾರೆ.