ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂತು ‘ವಿಜಯಾನಂದ’ದ ಟೀಸರ್‌

Last Updated 2 ಆಗಸ್ಟ್ 2022, 11:22 IST
ಅಕ್ಷರ ಗಾತ್ರ

ವಿಆರ್‌ಎಲ್‌ ಸಂಸ್ಥೆಯ ವಿಆರ್‌ಎಲ್‌ ಫಿಲ್ಮ್ ಪ್ರೊಡಕ್ಷನ್ಸ್‌ ಲಾಂಛನದ ಅಡಿಯಲ್ಲಿ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಗಾಥೆ ಆಧರಿತ ಚಿತ್ರ ‘ವಿಜಯಾನಂದ’ದ ಟೀಸರ್‌ ಬಿಡುಗಡೆಯಾಗಿದೆ.

ಟೀಸರ್‌ ನಲ್ಲಿ ವಿಜಯ ಸಂಕೇಶ್ವರ ಅವರ ತಾರುಣ್ಯದ ದಿನಗಳು, ಉದ್ಯಮ ಆರಂಭಿಸಿದ ಸಂದರ್ಭಗಳನ್ನು ಸಂಕ್ಷಿಪ್ತವಾಗಿ ತೋರಿಸಲಾಗಿದೆ. ನಿಹಾಲ್‌ ಈ ಚಿತ್ರದ ನಾಯಕ. ಮಂಡಿಯೊಂದರ ಸಾಹುಕಾರನಾಗಿ ರವಿಚಂದ್ರನ್‌, ವಿಜಯ ಸಂಕೇಶ್ವರರ ತಂದೆಯ ಪಾತ್ರದಲ್ಲಿ ಅನಂತನಾಗ್‌ ಕಾಣಿಸಿಕೊಂಡಿದ್ದಾರೆ. ಟೀಸರೇ ಒಂದು ಹೊಸ ಕಥೆಯನ್ನು ಹೇಳುವಂತೆ ಮೂಡಿಬಂದಿದೆ.ರಿಷಿಕಾ ಶರ್ಮಾ ಈ ಚಿತ್ರದ ನಿರ್ದೇಶಕಿ.

ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಈ ಚಿತ್ರ ಡಬ್‌ ಆಗಲಿದೆ.ವಿನಯಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಅನೀಶ್ ಕುರುವಿಲ್ಲಾ, ಸಿರಿ ಪ್ರಹ್ಲಾದ್ ಮತ್ತು ಭರತ್ ಬೋಪಣ್ಣ ತಾರಾಗಣದಲ್ಲಿದ್ದಾರೆ.

ಗೋಪಿ ಸುಂದರ್ ಅವರ ಸಂಗೀತವಿದೆ. ಈ ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರವಿವರ್ಮಾ ಅವರ ಸಾಹಸ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT