ನವದೆಹಲಿ: ‘ಕುಟುಂಬ ಮತ್ತು ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿದ್ದೆನೆಯೇ ವಿನಃ ನಟನೆಯಿಂದ ನಿವೃತ್ತಿ ಪಡೆಯುತ್ತಿಲ್ಲ’ ಎಂದು ‘12th ಫೇಲ್’ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸಿ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ವಿಕ್ರಾಂತ್ ಮಾಸ್ಸಿ ಅವರ ಇನ್ಸ್ಟಾಗ್ರಾಂ ಪೋಸ್ಟ್ ಅನ್ನು ಉಲ್ಲೇಖಿಸಿ ವರದಿ ಮಾಡಿದ್ದ ಹಲವು ಮಾಧ್ಯಮಗಳು ವಿಕ್ರಾಂತ್ ಅವರು ನಟನೆಗೆ ವಿದಾಯ ಹೇಳಿದ್ದಾರೆ ಎಂದು ವರದಿ ಮಾಡಿದ್ದವು.

ಇದೀಗ ಈ ಬಗ್ಗೆ ಸೃಷ್ಟೀಕರಣ ನೀಡಿ ಹೇಳಿಕೆ ಬಿಡುಗಡೆ ಮಾಡಿರುವ ವಿಕ್ರಾಂತ್, ನಟನೆಯಿಂದ ನಿವೃತ್ತಿ ಪಡೆಯುತ್ತಿಲ್ಲ, ಬೆಳ್ಳಿಪರದೆಯಿಂದ ತುಸು ವಿರಾಮ ಪಡೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ.
.ನಟನೆಗೆ ವಿದಾಯ ಹೇಳಿದ ‘12th ಫೇಲ್’ ಖ್ಯಾತಿಯ ನಟ ವಿಕ್ರಾಂತ್ ಮಾಸ್ಸಿ.
‘ಇನ್ಸ್ಟಾಗ್ರಾಂನಲ್ಲಿ ನಾನು ಮಾಡಿದ ಪೋಸ್ಟ್ ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಕುಟುಂಬ ಮತ್ತು ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸಲು ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಸಮಯ ಬಂದಾಗ ಮತ್ತೆ ಬೆಳ್ಳಿತೆರೆಗೆ ಹಿಂದಿರುತ್ತೇನೆ’ ಎಂದರು.

‘ನನಗೆ ಸಾಧ್ಯವಾಗಿರುವುದು ನಟನೆಯೊಂದೆ. ಇವತ್ತು ನಾನು ಏನು ಪಡೆದಿದ್ದೆನೋ ಅದೆಲ್ಲ ನಟನೆಯಿಂದಲೇ ಪಡೆದಿರುವುದು. ನಾನು ಮಾನಸಿಕ ಮತ್ತು ದೈಹಿಕವಾಗಿ ಸ್ಪಲ್ಪ ದಣಿದಿದ್ದು, ಅದಕ್ಕಾಗಿ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ’ ಎಂದರು.

ವಿಕ್ರಾಂತ್ ಹೇಳಿದ್ದೇನು?

‘ಕಳೆದ ಕೆಲವು ವರ್ಷಗಳು ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿದ್ದವು. ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಆದರೆ, ಮನೆಗೆ ಹಿಂದಿರುಗಲು ಇದು ಸೂಕ್ತ ಸಮಯವಾಗಿದೆ. ಒಬ್ಬ ತಂದೆಯಾಗಿ, ಗಂಡನಾಗಿ, ಮಗನಾಗಿ, ನಟನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂದು ಸೋಮವಾರ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

‘2025ರಲ್ಲಿ ಕೊನೆಯದಾಗಿ ಪರಸ್ಪರ ಭೇಟಿಯಾಗೋಣ. ಎರಡು ಸಿನಿಮಾಗಳು ಮತ್ತು ಸಾಕಷ್ಟು ನೆನಪುಗಳು ನನ್ನೊಂದಿಗಿವೆ’ ಎಂದು ಪೋಸ್ಟ್ನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.