ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Emmy Awards: ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಗೆದ್ದ ಕಾಮಿಡಿಯನ್ ವೀರ್‌ ದಾಸ್

Published 21 ನವೆಂಬರ್ 2023, 6:32 IST
Last Updated 21 ನವೆಂಬರ್ 2023, 6:32 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ವೀರ್‌ ದಾಸ್: ಲ್ಯಾಂಡಿಂಗ್‌’ ಕಾಮಿಡಿ ಸರಣಿಗಾಗಿ ಭಾರತದ ಜನಪ್ರಿಯ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್ ವೀರ್‌ ದಾಸ್ ಅವರು ಪ್ರತಿಷ್ಠಿತ ಎಮ್ಮಿ ಇಂಟರ್‌ನ್ಯಾಷನಲ್‌ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಕಾಮಿಡಿ ವಿಭಾಗದಲ್ಲಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ವೀರ್‌ ದಾಸ್‌, ಬ್ರಿಟಿಷ್ ಕಾಮಿಡಿ ಸರಣಿ 'ಡೆರಿ ಗರ್ಲ್ಸ್ ಸೀಸನ್ 3'ನೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

‘ಸ್ಥಳೀಯವಾಗಿ ಕಥೆಗಳನ್ನು ರಚಿಸುವುದರಿಂದ ಹಿಡಿದು ಜಾಗತಿಕ ಪುರಸ್ಕಾರವನ್ನು ಪಡೆಯುವವರೆಗೂ ನನ್ನ ಪಯಣವು ಸವಾಲಿನಿಂದ ಕೂಡಿತ್ತು. ನನ್ನ ಈ ಪಯಣದಲ್ಲಿ ನೆಟ್‌ಫ್ಲಿಕ್ಸ್ ಪ್ರಮುಖ ಪಾತ್ರ ವಹಿಸಿದೆ. ಇದು ಕೇವಲ ನನ್ನ ಪಾಲಿನ ಗೆಲುವಲ್ಲ, ಇಡೀ ಭಾರತೀಯ ಹಾಸ್ಯ ಕ್ಷೇತ್ರಕ್ಕೆ ಸಂದ ಗೆಲುವಾಗಿದೆ’ ಎಂದು ವೀರ್‌ ದಾಸ್‌ ಹೇಳಿಕೆ ನೀಡಿದ್ದಾರೆ.

2021ರ ಎಮ್ಮಿ ಪ್ರಶಸ್ತಿಗೆ ‘ವೀರ ದಾಸ್: ಫಾರ್ ಇಂಡಿಯಾ’ ಕಾಮಿಡಿ ಸರಣಿಯು ನಾಮನಿರ್ದೇಶನಗೊಂಡಿತ್ತು. ಆ ಮೂಲಕ ಎಮ್ಮಿ ಪ್ರಶಸ್ತಿಗೆ ಇದು ಅವರ ಎರಡನೇ ನಾಮನಿರ್ದೇಶನ ಮತ್ತು ಮೊದಲ ಗೌರವವಾಗಿದೆ.

ನ್ಯೂಯಾರ್ಕ್‌ನ ಹಿಲ್ಟನ್ ಮಿಡ್‌ಟೌನ್‌ನಲ್ಲಿ ಸೋಮವಾರ 51ನೇ ಅಂತರರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಈ ಹಿಂದೆ ‘ಎರಡು ರೀತಿಯ ಭಾರತದಿಂದ ಬಂದಿದ್ದೇನೆ’ ಹೇಳಿಕೆ ವಿಚಾರವಾಗಿ ವೀರ್‌ ದಾಸ್‌ ಭಾರೀ ವಿವಾದಕ್ಕೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT