ಸೋಮವಾರ, ಸೆಪ್ಟೆಂಬರ್ 20, 2021
23 °C

ವಿಶಾಲ್‌-ಶ್ರದ್ಧಾ ನಟನೆಯ ‘ಚಕ್ರ’ ಸಿನಿಮಾದ ಟ್ರೇಲರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ವಿಶಾಲ್‌ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ‘ಚಕ್ರ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. 2.08 ನಿಮಿಷ ಅವಧಿಯ ಈ ಟ್ರೇಲರ್‌ ಸೈಬರ್‌ ಕ್ರೈಮ್‌ ಸುತ್ತ ಹೆಣೆದ ಥ್ರಿಲ್ಲರ್‌ ಕಥೆಯ ಬಗ್ಗೆ ಹೊಳಹು ನೀಡುತ್ತದೆ.

ಕಳೆದ ವರ್ಷ ಸುಂದರ್‌ ಸಿ. ನಿರ್ದೇಶಿಸಿದ್ದ ‘ಆ್ಯಕ್ಷನ್’ ಚಿತ್ರದಲ್ಲಿ ವಿಶಾಲ್‌ ನಟಿಸಿದ್ದರು. ಆದರೆ, ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿರಲಿಲ್ಲ. ಹಲವು ತಿಂಗಳ ಬಳಿಕ ವಿಶಾಲ್‌ ನಟನೆಯ ‘ಚಕ್ರ’ ಸಿನಿಮಾ ತೆರೆಗೆ ಸಜ್ಜಾಗಿದ್ದು, ಕುತೂಹಲ ಹೆಚ್ಚಿಸಿದೆ. ಅಂದಹಾಗೆ ಈ ಚಿತ್ರ ಕನ್ನಡದಲ್ಲಿಯೂ ಬಿಡುಗಡೆಯಾಗಲಿದೆ.

ಚಿತ್ರದಲ್ಲಿ ವಿಶಾಲ್‌ ಅವರದು ಮಿಲಿಟರಿ ಅಧಿಕಾರಿಯ ಪಾತ್ರ. ಶ್ರದ್ಧಾ ಶ್ರೀನಾಥ್ ತನಿಖಾಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ಹ್ಯಾಕರ್ಸ್‌ ತಂಡವೊಂದು ಬೆಂಗಳೂರಿನಲ್ಲಿ 49 ಮನೆಗಳಲ್ಲಿ ದರೋಡೆ ನಡೆಸುತ್ತದೆ. ವಿಶಾಲ್‌ ಮನೆಯಲ್ಲಿಯೂ ‘ಅಶೋಕ ಚಕ್ರ’ ಕಳವಾಗುತ್ತದೆ. ಹ್ಯಾಕರ್ಸ್‌ ಪತ್ತೆಗೆ ಈ ಇಬ್ಬರು ಕಾರ್ಯಾಚರಣೆಗೆ ಇಳಿಯುತ್ತಾರೆ. ಕೊನೆಗೆ, ದರೋಡೆಕೋರರನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ ಎಂಬುದೇ ಚಿತ್ರದ ಕಥಾಹಂದರ.

ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡದಲ್ಲಿ ಟ್ರೇಲರ್‌ ಬಿಡುಗಡೆಯಾಗಿದೆ. ಮೋಹನ್‌ ಲಾಲ್‌, ರಾನಾ ದಗ್ಗುಬಾಟಿ, ಯಶ್‌ ಮತ್ತು ಕಾರ್ತಿ ಈ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಎಂ.ಎಸ್‌. ಆನಂದನ್‌. ನಟಿ ರೆಜಿನಾ ಕಸ್ಸಂದ್ರ ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೇ ಮೊದಲ ವಾರದಲ್ಲಿಯೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್‌ನಿಂದಾಗಿ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು