ನೆಟ್ಫ್ಲಿಕ್ಸ್ ವೇದಿಕೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಹಿಂದಿ ವೆಬ್ ಸರಣಿ ‘ಸೇಕ್ರೆಡ್ ಗೇಮ್ಸ್’. 2018ರ ಜೂನ್ನಲ್ಲಿ ಪ್ರಸಾರಗೊಂಡಿದ್ದ ಈ ಸರಣಿಯ ಸೀಸನ್-1 ಹಲವು ಕಾರಣಗಳಿಂದ ವಿವಾದಗಳಿಗೂ ಕಾರಣವಾಗಿತ್ತು.

ಅಶ್ಲೀಲ, ರಾಜಕೀಯ ಹಾಗೂ ಧಾರ್ಮಿಕವಾಗಿ ವಿವಾದಕ್ಕೀಡಾದ ವಿಚಾರಗಳ ಉಲ್ಲೇಖದಿಂದ ಇದು ಟೀಕೆಗಳಿಗೂ ಗುರಿಯಾಗಿತ್ತು. ಇದೀಗ ಈ ಸರಣಿಯ ಸೀಸನ್-2 ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಿದೆ. ಮೊದಲ ಸೀಸನ್ನಂತೆ ಇಲ್ಲೂ ಎಂಟು ಕಂತುಗಳಲ್ಲಿ ಸರಣಿಯನ್ನು ಕಟ್ಟಿಕೊಡಲಾಗಿದೆ. ಸುಮಾರು 55 ನಿಮಿಷಗಳ ಅವಧಿಯ ಪ್ರತಿ ಕಂತು ಕೂಡ ಉತ್ತಮವಾಗಿ ಮೂಡಿ ಬಂದಿದೆ.

ವಿಕ್ರಮ್ ಚಂದ್ರ ಅವರ ‘ಸೇಕ್ರೆಡ್ ಗೇಮ್ಸ್’ ಕಾದಂಬರಿಯನ್ನು ಆಧರಿಸಿ ಈ ಥ್ರಿಲ್ಲರ್ ವೆಬ್ ಸರಣಿ ನಿರ್ಮಾಣಗೊಂಡಿದ್ದು, ಸೀಸನ್-1ಅನ್ನು ವಿಕ್ರಮಾದಿತ್ಯ ಮೋಟ್ವಾನೆ ಮತ್ತು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದರು.

ಎರಡನೇ ಸೀಸನ್ ಅನುರಾಗ್ ಹಾಗೂ ನೀರಜ್ ಘಾಯ್ವಾನ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಗ್ಯಾಂಗ್ಸ್ಟರ್ ಗಣೇಶ ಗಾಯತೊಂಡೆ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಮತ್ತು ಪೊಲೀಸ್ ಅಧಿಕಾರಿ ಸರ್ತಾಜ್ ಸಿಂಗ್ ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿ ಖಾನ್ ಸರಣಿಯಲ್ಲಿ ಮೋಡಿ ಮಾಡಿದ್ದಾರೆ.ಸೀಸನ್ ಎರಡರಲ್ಲಿ ಪಂಕಜ್ ತ್ರಿಪಾಠಿ ಅವರು ಗುರೂಜಿ ಪಾತ್ರದಲ್ಲಿ ಮಿಂಚಿದ್ದಾರೆ. ಅಲ್ಲದೆ ಕಲ್ಕಿ ಕೋಚ್ಲಿನ್ ಅವರ ಪಾತ್ರವು ಗಮನ ಸೆಳೆಯುತ್ತದೆ.

ಮುಂಬೈ ನಗರ ಅಪಾಯದಲ್ಲಿದೆ. ನಗರವನ್ನು 25 ದಿವಸಗಳೊಳಗೆ ಕಾಪಾಡು ಎಂದು ಗ್ಯಾಂಗ್ಸ್ಟರ್ ಗಣೇಶ್ ಗಾಯತೊಂಡೆ ಪೊಲೀಸ್ ಅಧಿಕಾರಿ ಸರ್ತಾಜ್ ಸಿಂಗ್ಗೆ ಕರೆ ಮಾಡಿ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಕಥಾನಕದೊಂದಿಗೆ ಮೊದಲ ಸರಣಿ ಆರಂಭವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ಸರ್ತಾಜ್ ಸಿಂಗ್ ನಡೆಸುವ ಸಾಹಸವೇ ಸೀಸನ್ ಒಂದರ ಕಥಾಸಾರ.

ಸೀಸನ್ ಎರಡರಲ್ಲೂ ಈ ಕಥೆ ಮುಂದುವರಿಯುತ್ತದೆ. ಮೊದಲ ಸೀಸನ್ಗೆ ಹೋಲಿಸಿದರೆ ಎರಡನೇ ಸೀಸನ್ ಭಿನ್ನವಾಗಿ ಮೂಡಿ ಬಂದಿದೆ. ಮುಂಬೈ ನಗರಕ್ಕೆ ಯಾವ ರೀತಿಯ ಕಂಟಕ ಎದುರಾಗುತ್ತದೆ ಎಂಬುದರ ಸುರುಳಿಯನ್ನು ಬಿಚ್ಚಲು ಸರ್ತಾಜ್ ಸಿಂಗ್ ಯತ್ನಿಸಿದಷ್ಟೂ ಅದು ಜಟಿಲವಾಗುತ್ತಾ ಹೋಗುತ್ತದೆ.

ಕಥೆಗೆ ಪೂರಕವಾದ ಅಂಶಗಳನ್ನು ಫ್ಲ್ಯಾಶ್ ಬ್ಯಾಕ್ ಕಥನತಂತ್ರದ ಮೂಲಕ ವಿವರಿಸುತ್ತಾ ಕಥೆಯ ಎಳೆ ಎಲ್ಲೂ ಸಡಿಲವಾಗದಂತೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ.

ಮೊದಲ ಸೀಸನ್ನಲ್ಲಿ 90ರ ದಶಕದಲ್ಲಿ ಮುಂಬೈ ನಗರದಲ್ಲಿ ನಡೆದ ಗಲಭೆ, ರೌಡಿಸಂ ಮೊದಲಾದ ವಿಷಯಗಳ ಮೇಲೆ ಬೆಳಕು ಚೆಲ್ಲಿದರೆ, ಸೀಸನ್ ಎರಡರಲ್ಲಿ ಭಯೋತ್ಪಾದನೆ, ಅಣು ಬಾಂಬ್ ಮೊದಲಾದ ವಿಷಯಗಳ ಚಿತ್ರಣ ಹಾಗೂ ಹಿಂಸೆಗೆ ಪ್ರಚೋದನೆ ನೀಡುವ ಧಾರ್ಮಿಕ ನಾಯಕರ ವಿಡಂಬನೆ ಕೂಡ ಇದೆ.

ಮುಂಬೈ ಅಪರಾಧ ಜಗತ್ತಿನ ಕಥೆಯನ್ನು ಕಟ್ಟಿಕೊಡುವುದರೊಂದಿಗೆ ಧಾರ್ಮಿಕ ವಿಚಾರಗಳಿಗೂ ಸರಣಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಗರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಹವಣಿಸುವ ಭಯೋತ್ಪಾದಕರನ್ನು ಮಟ್ಟಹಾಕಲು ಸರ್ತಾಜ್ ಸಿಂಗ್ ನೇತೃತ್ವದಲ್ಲಿ ಪೊಲೀಸರು ನಡೆಸುವ ಸಾಹಸ ಕಾರ್ಯವನ್ನು ಒಟ್ಟು ಸರಣಿಯಲ್ಲಿ ರೋಚಕವಾಗಿ ಕಟ್ಟಿಕೊಡಲಾಗಿದೆ.

ಸೀಸನ್ -1ರ ಕಥೆ ಮುಂಬೈ ನಗರವನ್ನು ಕೇಂದ್ರೀಕರಿಸಿದರೆ, ಎರಡನೇ ಸೀಸನ್ ಕೀನ್ಯಾ ದೇಶಕ್ಕೂ ವಿಸ್ತರಿಸಿದೆ. ಮೊದಲ ಸೀಸನ್ ನೋಡಿದ ಬಳಿಕ ನಮ್ಮಲ್ಲಿ ಮೂಡುವ ಎಲ್ಲ ಪ್ರಶ್ನೆಗಳಿಗೂ ಸೀಸನ್ ಎರಡರಲ್ಲಿ ಉತ್ತರ ದೊರಕುತ್ತದೆ. ರಣವೀರ್ ಶೋರೆ, ಜತಿನ್ ಸರ್ನಾ, ಅನುಪ್ರಿಯ ಗೊಯೆಂಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕೆಲವೆಡೆ ಹಿಂಸೆ, ಅಶ್ಲೀಲತೆ ವಿಜೃಂಭಿಸಿದೆ. ಪ್ರತಿ ಕಂತಿನ ಕೊನೆಯಲ್ಲೂ ರೋಚಕತೆಯನ್ನು ಉಳಿಸಿಕೊಳ್ಳಲು ನಿರ್ದೇಶಕರು ಸಫಲರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.