ಮಂಗಳವಾರ, ಮೇ 18, 2021
23 °C

ನಟ ರಾಜ್‌ಕುಮಾರ್ ಅವರೊಂದಿಗಿನ ಮೊದಲ ಭೇಟಿಯ ಅನುಭವ ಹಂಚಿಕೊಂಡ ನಟ ರಜನಿಕಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಚೆನ್ನೈ: ತಮಿಳು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟ ರಜನಿಕಾಂತ್ ಅವರು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತನ್ನ ಆರಂಭದ ದಿನಗಳ ಬಗ್ಗೆ ನೆನಪನ್ನು ಹಂಚಿಕೊಂಡಿರುವ ಅವರು, ಕನ್ನಡದ ನಟಸೌರ್ವಭೌಮ ನಟ ಡಾ. ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಒಡನಾಟದ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಸುಮಾರು 14 ಅಥವಾ 15 ವರ್ಷದವರಿದ್ದಾಗ ‘ಅಣ್ಣಾವ್ರು’ ಅವರನ್ನು ಭೇಟಿಯಾಗುವ ಭಾಗ್ಯ ತನಗೆ ಸಿಕ್ಕಿದ್ದು, ಇದು ಮರೆಯಲಾಗದ ಅನುಭವ ಎಂಬುದು ಸಾಬೀತಾಯಿತು ಎಂದು ನಟ ತಿಳಿಸಿದ್ದಾರೆ.

ಘಟನೆಯ ಕುರಿತು ಮತ್ತಷ್ಟು ವಿವರಿಸಿರುವ ಅವರು, ಅದ್ಭುತ ನಟನ ವ್ಯಕ್ತಿತ್ವದಿಂದ ತಾನು ತುಂಬಾ ಪ್ರಭಾವಿತನಾಗಿದ್ದೇನೆ ಮತ್ತು ನಾನು ಅವರ ಪಾದಗಳನ್ನು ಮುಟ್ಟಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಜನಿಸಿದ ರಜನಿಕಾಂತ್ ಅವರು ಕರ್ನಾಟಕದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಮುನ್ನ ಸ್ಯಾಂಡಲ್‌ವುಡ್‌ನ ಕೆಲವು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 'ಸೋದರರ ಸವಾಲ್', 'ಪ್ರಿಯಾ ಮತ್ತು ತಪ್ಪಿದ ತಾಳ' ಗಮನಾರ್ಹ ಚಿತ್ರಗಳು. ಅಲ್ಲದೆ ಅಂಬರೀಶ್ ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದರು ಮತ್ತು ಅವರನ್ನು ತನ್ನ ‘ಸ್ಟೈಲ್ ಗುರು’ ಎಂದು ಪರಿಗಣಿಸಿದ್ದರು.

1980ರಲ್ಲಿ ತೆರೆಕಂಡ ಅವರ ಪೊಲ್ಲಧವನ್ ಸಿನಿಮಾವು ಕನ್ನಡದಲ್ಲಿ ರಾಜ್‌ಕುಮಾರ್ ಅವರು ಅಭಿನಯಿಸಿದ್ದ ಸೂಪರ್‌ಹಿಟ್ ಚಿತ್ರ 'ಪ್ರೇಮದ ಕಾಣಿಕೆ'ಯ ರೀಮೇಕ್ ಆಗಿತ್ತು. ರಜನಿ ಅವರು ಕೊನೆ ಬಾರಿ ಕಳೆದ ಸಂಕ್ರಾಂತಿಯಲ್ಲಿ ಬಿಡುಗಡೆಯಾದ ದರ್ಬಾರ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂದಿನ 'ಅನ್ನಾಥೆ'ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ತಾರಾಂಗಣದಲ್ಲಿ ಮೀನಾ, ಖುಷ್ಬೂ, ಕೀರ್ತಿ ಸುರೇಶ್ ಮತ್ತು ನಯನತಾರಾ ಇದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು