‘ಕನ್ನಡ ಮೂವೀಸ್ ಫೋರಮ್’ ಎಂಬ ಟ್ವಿಟರ್ ಹ್ಯಾಂಡಲ್ ಇಂದು ‘ಮೇಕಪ್ ಚಿತ್ರ’ ಪೋಸ್ಟರ್ಗಳನ್ನು ಹಂಚಿಕೊಂಡಿತ್ತು. ಇದನ್ನು ಬೇಸರದೊಂದಿಗೆ ರೀಟ್ವೀಟ್ ಮಾಡಿರುವ ಜಗ್ಗೇಶ್,‘ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಕ್ಕೆ ನನ್ನ ಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ ‘ಮೇಕಪ್’. ದೌರ್ಭಾಗ್ಯ, ಚಿತ್ರದಿಂದ2002ರಲ್ಲೆ ₹75 ಲಕ್ಷ ಕಳೆದುಕೊಂಡೆ! ಆ ಸಾಲ ತೀರಿಸಲು ಅಂದು ನಾನು ಮಾರಿದ ಮನೆ ಇಂದು ₹35 ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ. ಅದನ್ನು ಕೊಂಡುಕೊಂಡ ನನ್ನ ಮಿತ್ರನಿಗೆ ಇಂದು ₹16 ಲಕ್ಷ ಬಾಡಿಗೆ ಬರುತ್ತಿದೆ,’ ಎಂದು ಅವರು ಟ್ವೀಟ್ ಮಾಡಿದ್ದಾರೆ.