ಮಂಗಳವಾರ, ನವೆಂಬರ್ 12, 2019
28 °C

ಮಕ್ಕಳಿಬ್ಬರೂ ನನ್ನ ಹಾಗೆಯೇ ಇದ್ದಾರೆ: ಖುಷಿ ಹಂಚಿಕೊಂಡ ನಟ ಯಶ್

Published:
Updated:
prajavani

ಗಂಡು ಮಗುವಿಗೆ ತಾಯಿಯಾಗಿರುವ ‘ರಾಕಿಂಗ್‌ ಸ್ಟಾರ್’ ಯಶ್ ಅವರ ಪತ್ನಿ ರಾಧಿಕಾ ಪಂಡಿತ್‌ ಬುಧವಾರ ಬೆಂಗಳೂರಿನ ಪೋರ್ಟಿಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದಾರೆ. ರಾಧಿಕಾ ಡಿಸ್‌ಚಾರ್ಜ್‌ ಆಗಲಿದ್ದಾರೆ ಎಂಬ ಸುದ್ದಿ ತಿಳಿದ ಯಶ್‌ ಅಭಿಮಾನಿಗಳು ಆಸ್ಪತ್ರೆ ಮುಂದೆ ಜಮಾಯಿಸಿದ್ದರು.

ಯಶ್‌ ಮತ್ತು ರಾಧಿಕಾ ಹಸುಗೂಸಿನೊಟ್ಟಿಗೆ ಮಾಧ್ಯಮದವರ ಮುಂದೆ ಹಾಜರಾದರು. ಅವರೊಟ್ಟಿಗೆ ಪುತ್ರಿ ಐರಾ ಕೂಡ ಇದ್ದಳು. ಐರಾ ಯಶ್‌ ಅಭಿಮಾನಿಗಳಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದು ವಿಶೇಷವಾಗಿತ್ತು.

ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಯಶ್‌, ‘ನನಗೆ ಹೆಣ್ಣು ಮಗುವಾಗಬೇಕು ಎಂಬ ಆಸೆಯಿತ್ತು. ರಾಧಿಕಾಗೆ ಗಂಡು ಮಗು ಬೇಕೆಂಬ ಆಸೆ ಇತ್ತು. ಪುತ್ರನ ಜನನದ ಮೂಲಕ ಇಬ್ಬರ ಆಸೆಯೂ ಈಡೇರಿದೆ. ಐರಾ ಜನಿಸಿದ ವೇಳೆ ನನಗೆ ಬಿಡುವು ಇರಲಿಲ್ಲ. ನಾನು ಆಗ ‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾದ ಶೂಟಿಂಗ್‌ನಲ್ಲಿ  ಬ್ಯುಸಿಯಾಗಿದ್ದೆ. ಈ ಬಾರಿ ‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಶೂಟಿಂಗ್‌ನಿಂದ ವಿರಾಮ ಪಡೆದು ರಾಧಿಕಾ ಜೊತೆಯಲ್ಲಿಯೇ ಇದ್ದೇನೆ’ ಎಂದು ಹೇಳಿದರು.

‘ನನ್ನ ಇಬ್ಬರೂ ಮಕ್ಕಳ ನನ್ನ ಹಾಗೆಯೇ ಇದ್ದಾರೆ. ನಮ್ಮಿಬ್ಬರಿಗೂ ಮಕ್ಕಳೆಂದರೆ ಬಹು‍ಪ್ರೀತಿ’ ಎಂದು ಖುಷಿ ಹಂಚಿಕೊಂಡರು.  

ರಾಧಿಕಾ ಮಾತನಾಡಿ, ‘ಯಶ್‌ಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹಾಗಾಗಿ, ನಾನು ಅದೃಷ್ಟವಂತೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)