`ನಾನು ಡೌನ್ ಟು ಅರ್ಥ್ ಪರ್ಸನ್. ಹಾಗಾಗಿ ನಟಿಸಲು ಹೆಚ್ಚು ಹೋಂವರ್ಕ್ ಮಾಡುವುದಿಲ್ಲ~ ಎನ್ನುವ ಮೋಹಕ ನಟಿ ಆಸಿನ್‌ಗೆ ಬಾಲಿವುಡ್‌ನಲ್ಲಿಯೇ ಗಟ್ಟಿಯಾಗಿ ನೆಲೆ ನಿಲ್ಲುವ ಆಸೆ. ಅದಕ್ಕೇ ಅವರು ಕಮರ್ಷಿಯಲ್ ಸಿನಿಮಾಗಳತ್ತಲೇ ಹೆಚ್ಚು ಕಣ್ಣು ಹಾಯಿಸುತ್ತಿದ್ದಾರಂತೆ. ಕಾರಣ ಏನು ಅಂತ ಕೇಳಿದರೆ, ಅವರು ಹೇಳೋದು ಹೀಗೆ...

ಬಾಲಿವುಡ್‌ನಲ್ಲಿ ಇಲ್ಲಿವರೆಗೆ ನಟಿಸಿದ ಎಲ್ಲ ಚಿತ್ರಗಳು ನನಗೆ ಖುಷಿ ಕೊಟ್ಟಿವೆ. ಸಾಕಷ್ಟು ಸಂತೃಪ್ತಿಯನ್ನೂ ನೀಡಿವೆ. ಈ ವರ್ಷ ತೆರೆಕಂಡ `ಲಂಡನ್ ಡ್ರೀಮ್ಸ~, `ರೆಡಿ~, `ಹೌಸ್‌ಫುಲ್ 2~ ಚಿತ್ರಗಳು ನನ್ನ ಅಭಿಮಾನಿ ಬಳಗವನ್ನು ಹಿಗ್ಗಿಸಿಕೊಳ್ಳಲು ಸಹಕಾರಿಯಾದವು. ಹಾಗಾಗಿ ಈ ವರ್ಷ ಸದಾ ನನ್ನ ನೆನಪಿನಲ್ಲಿ ಉಳಿಯುವಂಥದ್ದು. ಇನ್ನು ಮುಂದೆಯೂ ನಾನು ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ನಿಶ್ಚಯಿಸಿಕೊಂಡಿದ್ದೇನೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದರೆ ಹೆಚ್ಚು ಜನರನ್ನು ಅಲ್ಪಕಾಲದಲ್ಲಿ ತಲುಪಬಹುದು.

ನನ್ನ ನಟನಾ ಸಾಮರ್ಥ್ಯಕ್ಕೆ ಸವಾಲೊಡ್ಡುವ ಪಾತ್ರಗಳನ್ನು ಸದಾ ಎದುರು ನೋಡುತ್ತಿರುತ್ತೇನೆ. ಅಂತಹ ಪಾತ್ರಗಳು ಮಾತ್ರ ಒಬ್ಬ ಕಲಾವಿದೆಯೊಳಗಿರುವ ನಟನೆಯ ತುಡಿತವನ್ನು ತಣಿಸಬಲ್ಲವು. ಹಾಗಂತ ನಾನು ಕಲಾತ್ಮಕ ಚಿತ್ರಗಳಿಗೆ ತೆರೆದುಕೊಳ್ಳುವುದಿಲ್ಲ. ನನ್ನ ಅಭಿನಯ ಸಾಮರ್ಥ್ಯಕ್ಕೆ ಸವಾಲೊಡ್ಡುವಂತಹ ಪಾತ್ರಗಳನ್ನು ಕಮರ್ಷಿಯಲ್ ಸಿನಿಮಾಗಳಲ್ಲೇ ಮಾಡಿ ಅಭಿಮಾನಿಗಳಿಗೆ ಹತ್ತಿರಾಗಬೇಕು. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ.

ಆಮೀರ್ ಖಾನ್ ಜತೆ ನಟಿಸಿದ ಘಜಿನಿ ಚಿತ್ರ ಬಾಲಿವುಡ್‌ನಲ್ಲಿ ನನಗೊಂದು ಐಡೆಂಟಿಟಿ ತಂದುಕೊಟ್ಟಿತು. ಮುಂದೆ ಸಲ್ಮಾನ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಜತೆ ನಟಿ ಸೈ ಎನಿಸಿಕೊಳ್ಳುವ ಅವಕಾಶ ತಂದುಕೊಟ್ಟಿದ್ದೂ ಇದೇ ಚಿತ್ರ. `ಘಜಿನಿ~ ಚಿತ್ರದಲ್ಲಿನ ನನ್ನ ಅಭಿನಯಕ್ಕೆ ಸಿಕ್ಕ ಬೋನಸ್‌ಗಳಿವು.

ಅಂದಹಾಗೆ, `ರೆಡಿ~, `ಹೌಸ್‌ಫುಲ್ 2~ ಹಾಗೂ `ಬೋಲ್ ಬಚ್ಚನ್~ ಮೂರು ಕಾಮಿಡಿ ಸಿನಿಮಾಗಳು. ಹಾಗಂತ ನಾನು ಕೇವಲ ಕಾಮಿಡಿ ಸಿನಿಮಾಗಳಿಗೆ ಮಾತ್ರ ಅಂಟಿಕೊಂಡಿರುವುದಿಲ್ಲ. ಈ ಮೂರು ಕಾಮಿಡಿ ಸಿನಿಮಾಗಳು ಒಂದರ ಹಿಂದೆ ಒಂದೆ ಬಂದದ್ದು ಕಾಕತಾಳೀಯವಷ್ಟೇ. ಆದರೂ ನನಗೆ ಕಾಮಿಡಿ ಸಿನಿಮಾಗಳಲ್ಲಿ ನಟಿಸಲು ತುಂಬಾ ಇಷ್ಟ. ಅದರಲ್ಲೂ, ಅಭಿಷೇಕ್ ಹಾಗೂ ಅಜಯ್ ಜತೆಗಿರುವ ಕಾಮಿಡಿ ಸಿನಿಮಾಗಳಲ್ಲಿ ನಟಿಸುವಾಗ ಸಿಗುವ ಖುಷಿಯೇ ಬೇರೆ~ ಎನ್ನುತ್ತಾ ಕಣ್ಣರಳಿಸಿ ನಗುತ್ತಾರೆ ಆಸಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.