ಮೊನಿಷಾ ಕೊಯಿರಾಲ, ಜಾಕಿ ಶ್ರಾಫ್, ಮಹಿಮಾ ಚೌಧರಿ ಸೇರಿದಂತೆ ತಮ್ಮ ಪ್ರತಿಯೊಂದು ಚಿತ್ರದಲ್ಲೂ ಹೊಸ ಮುಖಗಳನ್ನು ಪರಿಚಯಿಸುವ ಸುಭಾಷ್ ಘಾಯ್ ಈ ಬಾರಿಯೂ ಹೊಸ ಮುಖವೊಂದನ್ನು ಪರಿಚಯಿಸುತ್ತಿದ್ದಾರೆ. ಬಹಳ ವರ್ಷಗಳ ನಂತರ ‘ಕಾಂಚಿ’ ಚಿತ್ರದ ಮೂಲಕ ಮತ್ತೆ ಸಿನಿಮಾ ನಿರ್ದೇಶನದತ್ತ ಹೊರಳಿರುವ ಸುಭಾಷ್ ಅವರ ಈ ಚಿತ್ರದ ನಾಯಕಿ ಬಂಗಾಳಿ ಬೆಡಗಿ. ಇಂದ್ರಾಣಿ ಚಕ್ರವರ್ತಿ.

ಈ ಚೆಲುವೆ ಪಶ್ಚಿಮ ಬಂಗಾಳದಲ್ಲಿ ‘ಮಿಷ್ತಿ’ ಎಂದೇ ಖ್ಯಾತಿ. ‘ಕಾಂಚಿ’ ಚಿತ್ರದ ನಾಯಕಿ ಪಾತ್ರಕ್ಕೆ ನಡೆದ ಬರೋಬ್ಬರಿ 350 ಯುವತಿಯರ ಆಡಿಷನ್ನಲ್ಲಿ ಪಾಲ್ಗೊಂಡ ಈಕೆ, ಸುಭಾಷ್ ಅವರ ಗಮನ ಸೆಳೆಯುವಲ್ಲಿ ಸಫಲವಾಗಿದ್ದಾರೆ. ಮಿಷ್ತಿ ಎಂದರೆ ಬಂಗಾಳಿಯಲ್ಲಿ ಸಿಹಿ ಎಂದರ್ಥ. ಮುದ್ದು ಮೊಗದ ಈ ಚೆಲುವೆಯದ್ದು ಸ್ನಿಗ್ಧ ಸೌಂದರ್ಯ.

ಎರಡು ವರ್ಷದ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ಈಕೆ ಒಂದೆರಡು ಬಂಗಾಳಿ ಚಿತ್ರಗಳಲ್ಲಿ ನಟಿಸಿದ ಅನುಭವವನ್ನೂ ಹೊಂದಿದ್ದಾರೆ. ಸಂಘಮಿತ್ರ ಚೌಧರಿ ಅವರ ‘ಬಿದೇಹಿರ್ ಖೋಂಜೆ ರಬೀಂದ್ರನಾಥ್’ ಎಂಬ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಆನಂತರ ಸಂಘಮಿತ್ರ ಅವರೊಂದಿಗೇ ಒಂದು ಹಿಂದಿ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡರು. ಜೀನತ್ ಅಮಾನ್, ಶುಭ್ ಮುಖರ್ಜಿ ಮುಂತಾದವರೊಂದಿಗೆ ನಟಿಸಿದ್ದರಿಂದ ಬಾಲಿವುಡ್ ನಂಟೂ ನಿಧಾನವಾಗಿ ಬೆಳೆಯಿತು.

‘ಪೊರಿಚೋಯ್’ ಎಂಬ ಬಂಗಾಳಿ ಸಿನಿಮಾ ಚಿತ್ರೀಕರಣ ನಡೆಯುತ್ತಿರುವಾಗಲೇ ಇಂದ್ರಾಣಿ ಅವರನ್ನು ಸುಭಾಷ್ ತಮ್ಮ ‘ಕಾಂಚಿ’ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ಪ್ರಸೊನ್ಜೀತ್ ಚಟರ್ಜಿ ಅವರ ಕಣ್ಣನ್ನು ಕೆಂಪಾಗಾಗಿಸಿದೆ ಎಂಬ ಸುದ್ದಿ ಬಂಗಾಳಿ ಪತ್ರಿಕೆಯಲ್ಲಿ ಹರಿದಾಡಲಾರಂಭಿಸಿತು. ‘ನನ್ನ ಸಿನಿಮಾ ಪೂರ್ಣಗೊಳ್ಳದೇ ಆಕೆ ಮತ್ತೊಬ್ಬರೊಂದಿಗೆ ಹೇಗೆ ಹೋಗುತ್ತಾಳೆ’ ಎಂದು ಪ್ರಸೊನ್ಜೀತ್ ಖಾರವಾಗಿ ಪ್ರಶ್ನೆ ಎತ್ತಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಕೇವಲ ಎರಡು ವರ್ಷದ ತಮ್ಮ ಸಿನಿಮಾ ಯಾನದಲ್ಲಿ ಸಾಕಷ್ಟು ಭರವಸೆ ಮೂಡಿಸಿರುವ ಮಿಷ್ತಿ ಬಾಲಿವುಡ್ನ ನಾಯಕಿಯರ ಸಾಲಿಗೆ ಹೊಸ ಸೇರ್ಪಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.